ಉಪ್ಪಳ: ಕಾಸರಗೋಡು ಜಿಲ್ಲೆಯಲ್ಲೂ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು. ಕಯ್ಯಾರ್ ಕ್ರಿಸ್ತರಾಜ ದೇವಾಲಯದದಲ್ಲಿ ನಡೆದ ಬಲಿಪೂಜೆಯನ್ನು ರಾಂಚಿ ಸೆಮಿನರಿಯ ನಿರ್ದೇಶಕ ಫಾದರ್ ಜೋನ್ ಕ್ರಾಸ್ತ ನೆರವೇರಿಸಿದರು.
ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ಉಪಸ್ಥಿತರಿದ್ದರು. ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.
ಜಿಲ್ಲೆಯ ಎಲ್ಲಾ ಚರ್ಚ್‍ಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕ್ರಿಸ್ಮಸ್ ನ್ನು ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ರಾತ್ರಿ ನಡೆದ ದಿವ್ಯ ಬಲಿಪೂಜೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಗೋದಲಿ, ನಕ್ಷತ್ರ ಸೇರಿದಂತೆ ದೀಪಾಲಂಕಾರಗಳಿಂದ ಚರ್ಚ್‍ಗಳು ಗಮನ ಸೆಳೆಯುತ್ತಿತ್ತು. ಕ್ರಿಸ್ಮಸ್ ಗೀತೆಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ನಮಿಸಲಾಯಿತು.

.jpg)
.jpg)
.jpg)
