ತಿರುವನಂತಪುರಂ: ಶಬರಿಮಲೆಯಲ್ಲಿ ನಡೆದ ಚಿನ್ನ ಕಳ್ಳತನಕ್ಕೆ ಸಂಬಂಧಿಸಿದ ವಿಷಯದಲ್ಲಿ ಸರ್ಕಾರ ಪಕ್ಷ ರಾಜಕೀಯ ನೋಡುವುದಿಲ್ಲ ಮತ್ತು ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಶಿಕ್ಷಿಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸರ್ಕಾರ ಇಲ್ಲಿಯವರೆಗೆ ಪ್ರಕರಣದಲ್ಲಿ ಯಾರನ್ನೂ ಹೆಸರಿಸಿಲ್ಲ ಮತ್ತು ತನಿಖಾ ತಂಡವು ಅಪರಾಧಿಗಳನ್ನು ಪತ್ತೆಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರಾಜಕೀಯ ಲಾಭಕ್ಕಾಗಿ ಚಿತ್ರಗಳನ್ನು ವಿರೂಪಗೊಳಿಸಲಾಗುತ್ತಿದೆ ಮತ್ತು ಪ್ರಸಾರ ಮಾಡಲಾಗುತ್ತಿದೆ ಮತ್ತು ಯುಡಿಎಫ್ ಶಬರಿಮಲೆ ವಿಷಯದ ಬಗ್ಗೆ ನಿಲುವು ತೆಗೆದುಕೊಂಡಿದ್ದಕ್ಕಾಗಿ ಎಲ್‍ಡಿಎಫ್ ಅನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಚಿನ್ನ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಚಿತ್ರಗಳನ್ನು ಸೋನಿಯಾ ಗಾಂಧಿಯವರೊಂದಿಗೆ ಅವರು ಉಲ್ಲೇಖಿಸಿದರು.
ಈ ಪ್ರಕರಣದ ಆರೋಪಿಗಳು ಸೋನಿಯಾ ಗಾಂಧಿಯವರ ಭೇಟಿಯ ಅನುಮತಿ ಹೇಗೆ ಪಡೆದರು ಎಂಬುದನ್ನು ಸ್ಪಷ್ಟಪಡಿಸುವಂತೆ ಮುಖ್ಯಮಂತ್ರಿಯವರು ಸಂಬಂಧಪಟ್ಟವರನ್ನು ಕೇಳಿದರು, ಇದು ದೇಶದ ಉನ್ನತ ಕಾಂಗ್ರೆಸ್ ನಾಯಕರಿಗೂ ಸುಲಭವಾಗಿ ಲಭ್ಯವಿರದ ಭೇಟಿಯಾಗಿದೆ ಎಮದವರು ಬೊಟ್ಟುಮಾಡಿ ಉಲ್ಲೇಖಿಸಿದರು. ಈ ವಿಷಯಗಳನ್ನು ಮರೆಮಾಡಲು ಸುಳ್ಳು ಪ್ರಚಾರ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.

