ಬದಿಯಡ್ಕ: ಅಮೃತ ಭಾರತಕ್ಕೆ ಆದರ್ಶ ಬಾಲ್ಯ ಎಂಬ ಸಂದೇಶದೊಂದಿಗೆ ಬಾಲಗೋಕುಲ ಕೇರಳ ಸುವರ್ಣ ಜಯಂತಿಯ ಭಾಗವಾಗಿ ಕನ್ಯಾಕುಮಾರಿಯಿಂದ ಕಾಸರಗೋಡಿನ ವರೆಗೆ ನಡೆಯುವ ಬಾಲಗೋಕುಲ ಕಲಾಯಾತ್ರೆ ಭಾನುವಾರ ಸಂಜೆ ನೀರ್ಚಾಲು ಕೆಳಗಿನ ಪೇಟೆಯಲ್ಲಿ ಸಮಾರೋಪಗೊಂಡಿತು.
ಉತ್ತರ ಕೇರಳ ಬಾಲಗೋಕುಲ ಉಪಾಧ್ಯಕ್ಷ ಪ್ರಜಿತ್ ಮಾಸ್ತರ್ ಪ್ರಧಾನ ಭಾಷಣಗೈದು, ಆದರ್ಶ ವ್ಯಕ್ತಿತ್ವವನ್ನು ಎಳೆಯರು ಮೈಗೂಡಿಸಬೇಕು. ನಮ್ಮ ಮಣ್ಣಿನಿಂದ ಮೂಡಿಬಂದ ಕಲೆ, ಸಂಸ್ಕøತಿಗಳನ್ನು ಅಳವಡಿಸಿಕೊಂಡಾಗ ಬದುಕು ಪರಿಪೂರ್ಣಗೊಳ್ಳುತ್ತದೆ. ರಾಷ್ಟ್ರಪ್ರೇಮದ ಧೀಶಕ್ತಿಯನ್ನು ಆವಾಹಿಸಿಕೊಂಡು ಋಣಮುಕ್ತರಾಗುವಲ್ಲಿ ಯುವಜನ ಪ್ರಧಾನ ಪಾತ್ರ ವಹಿಸಬೇಕು ಎಂದರು.
ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಪತ್ರಕರ್ತ ಪುರುಷೋತ್ತಮ ಭಟ್.ಕೆ. ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಬಾಲಗೋಕುಲ ತಾಲೂಕು ಅಧ್ಯಕ್ಷ ಯೋಗೀಶ್ ಪೊಡಿಪ್ಪಳ್ಳ, ಕೋಶಾಧಿಕಾರಿ ದೇವದಾಸ್ ನುಳ್ಳಿಪ್ಪಾಡಿ, ಅನಿಲ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ಉಮೇಶ ಏಣಿಯರ್ಪು ಸ್ವಾಗತಿಸಿ, ದೀಪೇಶ್ ವಂದಿಸಿದರು. ಜಿಲ್ಲಾ ಭಗಿನಿ ಪ್ರಮುಖ್ ವೀಣಾ ಟೀಚರ್ ನಿರೂಪಿಸಿದರು.
ಬಳಿಕ ವಿವಿಧ ಬಾಲಗೋಕುಲ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ನೃತ್ಯ ವೈವಿಧ್ಯ ಕಲಾ ಪ್ರದರ್ಶನ ನೀಡಿದರು.

.jpg)
.heic)

