HEALTH TIPS

ಯಾವುದೇ ಶೀರ್ಷಿಕೆಯಿಲ್ಲ

2018ರಲ್ಲಿ ಭಾರಿ ಭೂಕಂಪನಗಳ ಸಂಖ್ಯೆ ಹೆಚ್ಚಳ 2018ನೇ ಇಸವಿಯಲ್ಲಿ ಜಗತ್ತಿನಾದ್ಯಂತ ವಿನಾಶಕಾರಿ ಭೂಕಂಪಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭೂಮಿಯ ಪರಿಭ್ರಮಣೆಯ ವೇಗದಲ್ಲಿ ಆಗುತ್ತಿರುವ ವ್ಯತ್ಯಾಸ ಇದಕ್ಕೆ ಕಾರಣ ಎಂದು ಅವರು ಕಂಡುಕೊಂಡಿದ್ದಾರೆ. ಈ ಏರಿಳಿತಗಳು ತೀರಾ ಸಣ್ಣವು. ಇದರಿಂದ ದಿನದ ಅವಧಿಯಲ್ಲಿ ಒಂದು ಮಿಲಿಸೆಕೆಂಡ್ ಮಾತ್ರ ಹೆಚ್ಚಲಿದೆ. ಆದರೆ ಇದರಿಂದ ಅಪಾರ ಪ್ರಮಾಣದ ಭೂಗತಶಕ್ತಿಯು ಬಿಡುಗಡೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. `ಭೂಮಿಯ ಪರಿಭ್ರಮಣೆ ಹಾಗೂ ಭೂಕಂಪನ ಪ್ರಕ್ರಿಯೆ ನಡುವೆ ಪರಸ್ಪರ ಸಂಬಂಧವಿದೆ. ಇದು ವಿಧ್ವಂಸಕಾರಿ ಭೂಕಂಪನಗಳಿಗೆ ದಾರಿ ಮಾಡಿಕೊಡಲಿದೆ' ಎಂದು ಅಮೆರಿಕ ಕೊಲರಾಡೊ ವಿಶ್ವವಿದ್ಯಾಲಯದ ರೋಜರ್ ಬಿಲ್ಹಾಮ್ ಹೇಳಿದ್ದಾರೆ. 1900ರಿಂದೀಚೆಗೆ ನಡೆದ ಏಳು ಹಾಗೂ ಅದಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನಗಳನ್ನು ಸಂಶೋಧಕರು ಅಧ್ಯಯನಕ್ಕೊಳಪಡಿಸಿದ್ದಾರೆ. ಇತರ ಸಮಯಕ್ಕೆ ಹೋಲಿಸಿದರೆ ಅತಿದೊಡ್ಡ ಭೂಕಂಪನಗಳು ಸಂಭವಿಸಿದ 5 ಅವಧಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಏರಿಳಿತದ ಅವಧಿ ಸುಮಾರು ಐದು ವರ್ಷಗಳದ್ದು. ಮುಂದಿನ ವರ್ಷ ಇದು ಭೂಮಿಯನ್ನು ಬಾಧಿಸಲಿದೆ. ಭೂಮಿಯ ತಿರುಗುವಿಕೆಯ ವೇಗವನ್ನು ಪರಮಾಣು ಗಡಿಯಾರದ ಮೂಲಕ ನಿಖರವಾಗಿ ಲೆಕ್ಕಹಾಕಬಹುದು ಎನ್ನುತ್ತಾರೆ ಬಿಲ್ಹಾಮ್. 20 ವರ್ಷಗಳಲ್ಲಿ ಬದಲಾದ ಭೂಮಿ 20 ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲ್ಮೈ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ'ದ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಇದಕ್ಕೆ ವಿವಿಧ ಉಪಗ್ರಹಗಳ ಮಾಹಿತಿಯನ್ನು ಪಡೆಯಲಾಗಿದೆ. 1970ರಿಂದಲೇ ಉಪಗ್ರಹಗಳು ಭೂಮಿಯ ಮೇಲೆ ನಿಗಾ ಇಟ್ಟಿವೆ. ಆದರೆ 1997ರಲ್ಲಿ ಸೀ ವೀವಿಂಗ್ ವೈಡ್ ಫೀಲ್ಡ್ ಸೆನ್ಸರ್ಗಳನ್ನು ಉಡಾವಣೆ ಮಾಡಿದ ಬಳಿಕ ಭೂ ಮೇಲ್ಮೈ ಹಾಗೂ ಸಾಗರದ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ. ಈ 20 ವರ್ಷ ಅವಧಿಯಲ್ಲಿ ಉಪಗ್ರಹಗಳು ನೀಡಿದ ದತ್ತಾಂಶಗಳಿಂದ ಸಾಗರದ ಸೂಕ್ಷ್ಮ ಸಸ್ಯವರ್ಗದ ಅಧ್ಯಯನ, ಭೂ ಮೇಲ್ಮೈನ ಬೆಳೆ ಇಳುವರಿ ಮೇಲೆ ನಿಗಾ ಹಾಗೂ ಆರ್ಕಟಿಕ್ ಸಸ್ಯವರ್ಗದಲ್ಲಿ ಆಗಿರುವ ಬದಲಾವಣೆ ಅರಿಯಲು ಸಹಾಯಕವಾಗಿದೆ. ಆರ್ಕಟಿಕ್ನಲ್ಲಿ ಹಸಿರು ಹೆಚ್ಚುತ್ತಿರುವುದನ್ನು ಪ್ರಮುಖವಾಗಿ ಗಮನಿಸಲಾಗಿದೆ. ಹವಾಮಾನ ವೈಪರೀತ್ಯಕ್ಕೆ ಪರಿಸರ ಹೇಗೆ ಸ್ಪಂದಿಸಿದೆ ಎಂದೂ ವಿಜ್ಞಾನಿಗಳು ಉತ್ತರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries