ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 22, 2017
ಮ್ಯೂಚುವಲ್ ಫಂಡ್ಸ್: 51,000 ಕೋಟಿ ಹೂಡಿಕೆ
ಹೂಡಿಕೆದಾರರು ಅಕ್ಟೋಬರ್ ತಿಂಗಳಿನಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ? 51,000 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್ಐ) ಮಾಹಿತಿ ನೀಡಿದೆ.
ಸೆಪ್ಟೆಂಬರ್ನಲ್ಲಿ 16,604 ಕೋಟಿ ಬಂಡವಾಳ ಹೊರಹೋಗಿತ್ತು. ಪ್ರಸಕ್ತ ಆಥರ್ಿಕ ವರ್ಷದ ಏಪ್ರಿಲ್?ಅಕ್ಟೋಬರ್ ಅವಧಿಯಲ್ಲಿ (7 ತಿಂಗಳು) ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಒಟ್ಟಾರೆ ? 2.5 ಲಕ್ಷ ಕೋಟಿ ಹೂಡಿಕೆಯಾಗಿದೆ.
ನೋಟು ರದ್ದತಿ ನಿಧರ್ಾರದಿಂದ ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಅತಿ ಹೆಚ್ಚಿನ ಲಾಭವಾಗಿದೆ. ನೋಟು ರದ್ದತಿಯಿಂದ ಬ್ಯಾಂಕ್ ಠೇವಣಿಗಳ ಬಡ್ಡಿದರ ಕಡಿಮೆಯಾಗಿದೆ. ಇದರಿಂದ ಹೂಡಿಕೆದಾರರು ಚಿನ್ನಾಭರಣ ಮತ್ತು ರಿಯಲ್ ಎಸ್ಟೇಟ್ಗಳಲ್ಲಿ ಬಂಡವಾಳ ತೊಡಗಿಸುವ ಬದಲಿಗೆ ಮ್ಯೂಚುವಲ್ ಫಂಡ್ನಂತಹ ಹಣಕಾಸು ಯೋಜನೆಗಳಲ್ಲಿ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಚಿನ್ನದ ಇಟಿಎಫ್ಗಳಿಂದ ಬಂಡವಾಳ ಹೊರಹರಿವು ಹೆಚ್ಚುತ್ತಿದೆ. ಅಕ್ಟೋಬರ್ನಲ್ಲಿ ? 34 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿದೆ.


