HEALTH TIPS

No title

ಇನ್ನು ಯಾವುದೇ ಅಂಗಡಿಯಿಂದಲೂ ರೇಶನ್ ಸಾಮಗ್ರಿ ಪಡೆಯಬಹುದು ಕೇರಳದಲ್ಲಿ ಹೊಸ ಯೋಜನೆ ಶೀಘ್ರ ಜಾರಿ ಕಾಸರಗೋಡು: ಮೊಬೈಲ್ ನಂಬರ್ ಬದಲಾಯಿಸದೆ ಬೇರೆ ಮೊಬೈಲ್ ಸಂಪರ್ಕ ಪಡೆಯುವ ಮಾದರಿಯನ್ನು ರೇಶನ್ ಕಾಡರ್್ಗಳಿಗೂ ಅನ್ವಯಗೊಳಿಸುವ ಪೋಟರ್ೆಬಿಲಿಟಿ ಸೌಕರ್ಯ ಏರ್ಪಡಿಸುವ ಮಹತ್ತರ ಯೋಜನೆಗೆ ಕೇರಳ ಸರಕಾರವು ರೂಪು ನೀಡಿದೆ. ರೇಶನ್ ಕಾಡರ್್ಗಳನ್ನು ಈಗಿರುವ ರೇಶನ್ ಅಂಗಡಿಯಲ್ಲೇ ನೆಲೆಗೊಳಿಸುವಂತೆ ಮಾಡಿ ರಾಜ್ಯದ ಯಾವುದೇ ರೇಶನ್ ಅಂಗಡಿಯಿಂದ ಬೇಕಾದರೂ ರೇಶನ್ ಸಾಮಗ್ರಿಗಳನ್ನು ಖರೀದಿಸಬಹುದಾದ ಹೊಸ ವ್ಯವಸ್ಥೆ ಇದಾಗಿದೆ. ಇದಕ್ಕಿರುವ ಹೊಸ ಮೊಬೈಲ್ ಅಪ್ಲಿಕೇಷನ್ ಯೋಜನೆಯನ್ನು ತಯಾರಿಸಲಾಗುತ್ತಿದೆ. ಜಾರಿಯಲ್ಲಿರುವ ವ್ಯವಸ್ಥೆಯಂತೆ ರೇಶನ್ ಕಾಡರ್್ ನೋಂದಾಯಿಸಿರುವ ಅಂಗಡಿಯಿಂದ ಮಾತ್ರವೇ ರೇಶನ್ ಸಾಮಗ್ರಿಗಳನ್ನು ಪಡೆಯಬಹುದು. ಆದರೀಗ ಹೊಸ ವ್ಯವಸ್ಥೆಯಿಂದ ಕಾಡರ್್ದಾರರಿಗೆ ಬಹಳಷ್ಟು ಪ್ರಯೋಜನ ಲಭಿಸಲಿದೆ. ಹೊರ ರಾಜ್ಯಗಳ ಲಕ್ಷಾಂತರ ಮಂದಿ ಕೇರಳದಲ್ಲಿ ದುಡಿಯುತ್ತಿದ್ದು, ಅವರಿಗೆ ಕೂಡ ಪ್ರಯೋಜನಕಾರಿಯಾಗುವ ರೀತಿಯಲ್ಲಿ ನೂತನ ಕ್ರಮವನ್ನು ಕಾರ್ಯಗತಗೊಳಿಸಲು ಸರಕಾರವು ಮುಂದಾಗಿದೆ. ಇದೇ ವೇಳೆ ದೇಶದ ಯಾವುದೇ ರೇಶನ್ ಅಂಗಡಿಯಿಂದಲೂ ರೇಶನ್ ಸಾಮಗ್ರಿಗಳನ್ನು ಪಡೆಯುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರವೂ ಅಗತ್ಯದ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಅದರಂತೆ ರೇಶನ್ ಅಂಗಡಿಗಳಲ್ಲಿ ಇ-ಪೋಸ್ (ಇಲೆಕ್ಟ್ರೋನಿಕ್ ಫ್ರೆಂಟ್ ಆಫ್ ಸೇಲ್) ಯಂತ್ರಗಳನ್ನು ಸ್ಥಾಪಿಸುವ ವೇಳೆ ರೇಶನ್ ಕಾಡರ್್ಗಳನ್ನು ಪೋಟರ್್ಗೈಯ್ಯುವ ಸೌಕರ್ಯವೂ ಅನುಷ್ಠಾನಕ್ಕೆ ಬರಲಿದೆ. ರೇಶನ್ ಅಂಗಡಿಗಳಲ್ಲಿ ಇಂತಹ ಯಂತ್ರಗಳನ್ನು ಸ್ಥಾಪಿಸುವ ಕ್ರಮಕ್ಕೆ ನವೆಂಬರ್ ಕೊನೆಯೊಳಗೆ ಚಾಲನೆ ನೀಡಿ ಫೆಬ್ರವರಿ ತಿಂಗಳೊಳಗೆ ಪೂತರ್ಿಗೊಳಿಸಲು ತೀಮರ್ಾನಿಸಲಾಗಿದೆ. ಇದು ವಿದ್ಯುಕ್ತವಾಗಿ ಜಾರಿಗೊಂಡ ಬಳಿಕ ರೇಶನ್ ಕಾಡರ್್ದಾರರು ಇನ್ನು ಮುಂದೆ ಯಾವುದೇ ರೇಶನ್ ಅಂಗಡಿಯಿಂದಲೂ ಸಾಮಗ್ರಿಗಳನ್ನು ಖರೀದಿಸಬಹುದು. ತಮ್ಮ ರೇಶನ್ ಅಂಗಡಿಗಳಲ್ಲಿ ವಿತರಿಸುವ ಸಾಮಗ್ರಿಗಳು ಕಳಪೆ ಮಟ್ಟದ್ದಾಗಿದ್ದಲ್ಲಿ ರೇಶನ್ ಕಾಡರ್್ದಾರರು ಇತರ ಅಂಗಡಿಗಳಿಂದಲೂ ರೇಶನ್ ಪಡೆಯಬಹುದಾಗಿದೆ. ಹಾಗಾದಲ್ಲಿ ರೇಶನ್ ಅಂಗಡಿ ಮಾಲಕರ ಮ`್ಯೆ ಆರೋಗ್ಯಕರ ಸ್ಪಧರ್ೆಗೂ ಅವಕಾಶ ಲಭಿಸಲಿದೆ. ಆಯಾ ತಾಲೂಕು ಮಟ್ಟದಲ್ಲಿ ರೇಶನ್ ಅಂಗಡಿಗಳನ್ನು ನೋಂದಾಯಿಸಬಹುದು. ತಾಲೂಕು ಬಿಟ್ಟು ಬೇರೆ ತಾಲೂಕುಗಳಿಗೆ ವಾಸ ಬದಲಾಯಿಸಿದ್ದಲ್ಲಿ ಆ ಕುರಿತಾದ ಮಾಹಿತಿಯನ್ನು ಮೊಬೈಲ್ ಆಪ್ಗೆ ಹಸ್ತಾಂತರಿಸಿದರೆ ಸಾಕು. ಹೀಗೆ ರೇಶನ್ ಅಂಗಡಿ ನೋಂದಾವಣೆ ಬದಲಾಯಿಸಿದಲ್ಲಿ ಅದಕ್ಕೆ ಹೊಂದಿಕೊಂಡು ಮೊದಲಿನ ರೇಶನ್ ಅಂಗಡಿಗೆ ಪೂರೈಸುವ ಆಹಾರ ಸಾಮಗ್ರಿಗಳ ಪೂರೈಕೆಯನ್ನು ಕಡಿಮೆಗೊಳಿಸಲಾಗುವುದು ಎಂದು ಸರಕಾರ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries