HEALTH TIPS

No title

ರಾಷ್ಟ್ರೀಯ ಹೆದ್ದಾರಿ ಇಕ್ಕಡೆಗಳಲ್ಲಿ ಸಸಿ ನೆಡುವ ಯೋಜನೆ ಕುಂಬಳೆ: ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸುವ ಯೋಜನೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಹೆದ್ದಾರಿಯ ಇಕ್ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಗುರಿಯನ್ನೂ ಹೊಂದಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಅವಕಾಶ ನೀಡಬೇಕೆಂದು ಕೇರಳ ಸರಕಾರವು ಕೇಂದ್ರ ಭೂಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದೆ. ಅದಕ್ಕೆ ಕೇಂದ್ರ ಸಚಿವರು ಅಂಗೀಕಾರ ನೀಡಿದ್ದಾರೆ. ರಾಜ್ಯದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಯೋಜನೆಗೆ 2018ರಲ್ಲಿ ಚಾಲನೆ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮವು ಹೇಳಿದೆ. ರಸ್ತೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಿ ಈಗಿರುವ ಎಲ್ಲಾ ಮರಗಳನ್ನು ಕಡಿಯಬೇಕಾಗಿ ಬರಲಿದೆ. ತಲಪಾಡಿಯಿಂದ ಜಿಲ್ಲೆಯ ಗಡಿಪ್ರದೇಶವಾದ ಕಾಲಿಕ್ಕಡವು ತನಕದ ಹೆದ್ದಾರಿ ಬದಿಗಳಲ್ಲಿ ಲಕ್ಷಾಂತರ ಮರಗಳಿವೆ. ಅವುಗಳಿಗೆಲ್ಲಾ ಶೀಘ್ರದಲ್ಲೇ ಕೊಡಲಿಯೇಟು ಬೀಳಲಿದೆ. ಅದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿಲ ತಾಪ ಇನ್ನಷ್ಟು ತಾರಕಕ್ಕೇರಲಿದೆ. ಮಾತ್ರವಲ್ಲ ನೈಸಗರ್ಿಕ ಸಂಪತ್ತಿನ ಮೇಲೂ ದುಷ್ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯೊಂದಿಗೆ ಅವುಗಳ ಇಕ್ಕಡೆಗಳಲ್ಲಿ ಹಾಗೂ ಅಗತ್ಯವಿದ್ದಲ್ಲಿ ವಿಭಾಜಕಗಳಲ್ಲಿ ಸಸಿಗಳನ್ನು ಬೆಳೆಸುವ ತೀಮರ್ಾನಕ್ಕೆ ಬರಲಾಗಿದೆ. ಇದಕ್ಕೆ ಅಗತ್ಯದ ನೆರವನ್ನು ಕೇರಳದ ಅರಣ್ಯ ಇಲಾಖೆಯ ಸಾಮೂಹಿಕ ಅರಣ್ಯೀಕರಣ ವಿಭಾಗವು ಒದಗಿಸಲಿದೆ. ಕೇವಲ ನೆರಳು ಮರಗಳು ಮಾತ್ರವಲ್ಲ ಹಲಸು, ಮಾವು ಇತ್ಯಾದಿ ಫಲವೃಕ್ಷ ಸಸಿಗಳು, ಬೇವು, ಸಾಗುವಾನಿ ಮುಂತಾದ ಗಿಡಗಳನ್ನು ನೆಟ್ಟು ಬೆಳೆಸಲು ನಿರ್ಧರಿಸಲಾಗಿದೆ. ಆ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ನೆರಳುಮಯ ಮಾತ್ರವಲ್ಲ ಹಸಿರುಮಯಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries