ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಕನ್ನಡ ಕೈರಳಿಯ ದಶಮಾನೋತ್ಸವ- ಸಮಾಜ ರತ್ನ ಪ್ರಶಸ್ತಿ ಪ್ರಧಾನ
ಉಪ್ಪಳ: ಗಡಿನಾಡು ಕಾಸರಗೋಡಿನ ಕನ್ನಡ ಕೈರಳಿ ಸಂಸ್ಥೆಯ 10ನೇ ವರ್ಷದ ವಿಶೇಷ ಕಾರ್ಯಕ್ರಮ ಹಾಗೂ ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ನ. 21 ರಂದು ಮಂಗಳವಾರ ಅಪರಾಹ್ನ 3 ಗಂಟೆಗೆ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಲಿದೆ.
ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸುವರು.ಕನರ್ಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಶರ್ಿ ಡಾ.ಕೆ.ಮುರಳೀಧರ್, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಗಲ್ಪಾಡಿ ಗ್ರಾಮ ಪಂಚಾಯತು ಅದ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಬ್ಲಾ.ಪಂ.ಸದಸ್ಯ ಕೆ.ಆರ್.ಜಯಾನಂದ, ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಹಿಂದೂಸ್ಥಾನ್ ಗ್ರೂಫ್ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಪಾವೂರು, ಕನರ್ಾಟಕ ಸಮಾಜಾಭಿವೃದ್ದಿ ಬೋಡರ್್ನ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕೇರಳ ತೋಟಗಾರಿಕಾ ಬೆಳೆಗಳ ಬೋಡರ್್ ನಿದರ್ೇಶಕ ಬಿ.ವಿ.ರಾಜನ್, ಉದ್ಯಮಿ ಇಷರ್ಾದ್ ಮಲ್ಲಂಗೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕಿ ಕೋತ ಕೃಷ್ಣವೇಣಿ ಹೈದರಬಾದ್ ರವರಿಗೆ ಕನ್ನಡ ಕೈರಳಿ ಕೊಡಮಾಡುವ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


