ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಆಧಾರ್ ಮಾಹಿತ ಸಂಪೂರ್ಣ ಸುರಕ್ಷಿತ: ಯುಐಡಿಎಐ
ನವದೆಹಲಿ: ಆಧಾರ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಸೋಮವಾರ ಸ್ಪಷ್ಟಪಡಿಸಿದೆ.
ಆಧಾರ್ ಸಂಖ್ಯೆ ರಹಸ್ಯ ಸಂಖ್ಯೆಯಲ್ಲಿ. ಯಾವುದೇ ಸೇವೆ ಪಡೆಯಲು ಅಥವಾ ಸಕರ್ಾರದ ಯೋಜನೆಗಳ ಲಾಭ ಪಡೆಯಲು ಅದನ್ನು ಹಂಚಿಕೊಳ್ಳಬಹುದಾಗಿದೆ. ಆಧಾರ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಇದನ್ನು ಯಾರೂ ಸೋರಿಕೆ ಮಾಡಿಲ್ಲ ಎಂದು ಯುಐಡಿಎಐ ಅಧಿಕಾರಿಗಳು ಆರ್ ಟಿಐ ಅಜರ್ಿಯೊಂದಕ್ಕೆ ಉತ್ತರಿಸಿದ್ದಾರೆ.
ಯುಐಡಿಎಐಯಿಂದ ಅಥವಾ ಅದರ ಸರ್ವರ್ ಯಾವುದೇ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ ಮತ್ತು ಕದ್ದಿಲ್ಲ ಎಂದು ಅಧಿಕಾರಿಗಳು 210 ಸಕರ್ಾರಿ ವೆಬ್ ಸೈಟ್ ಗಳು ಆಧಾರ್ ಮಾಹಿತಿ ಬಹಿರಂಗಪಡಿಸಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಆರ್ ಟಿಐ ಅಜರ್ಿಗೆ ಉತ್ತರಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಕರ್ಾರದ 210 ವೆಬ್ ಸೈಟ್ ಗಳಲ್ಲಿ ಫಲಾನುಭವಿಗಳ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಬಹಿರಂಗಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ


