ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಕೊನೆಗೂ ಮೋಕ್ಷಕಂಡ ಕುಂಬಳೆ ಬಸ್ ನಿಲ್ದಾಣ
ಕುಂಬಳೆ: ತೀವ್ರ ಅಪಾಯದ ಭೀತಿ ಎದುರಿಸುತ್ತಿದ್ದ ಕುಂಬಳೆ ಬಸ್ ನಿಲ್ದಾಣವನ್ನು ಮುರಿದು ತೆಗೆಯುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ದೊರಕಿದ್ದು, ಹಲವು ವರ್ಷಗಳ ವಿವಾದಾದ್ಮಕ ಕಟ್ಟಡ ಇದೀಗ ಪರಿಹಾರದ ದೆಸೆಯಲ್ಲಿದೆ.
ಸುಮಾರು 45 ವರ್ಷಗಳಷ್ಟು ಹಳೆಯ ಕುಂಬಳೆ ಬಸ್ ನಿಲ್ದಾಣ-ಶಾಪಿಂಗ್ ಕ್ಲಾಂಪ್ಲೆಕ್ಸ್ ಕಳೆದ ಐದು ವರ್ಷಳಿಂದೀಚೆಗೆ ತೀವ್ರ ಹಾನಿಗೊಳಗಾಗಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಮಧ್ಯೆ ಮೂರು ಬಾರಿ ಶಿಥಿಲ ಕಟ್ಟಡದ ಭಾಗಗಳು ತುಂಡಾಗಿ ಬಿದ್ದು, ಕೆಲವರು ಗಂಭೀರ ಗಾಯಗೊಂಡಿದ್ದರು. ಈ ನಡುವೆ ಕುಂಬಳೆ ಗ್ರಾ.ಪಂ. ಈ ನಿಲ್ದಾಣ ಮುರಿದು ತೆಗೆದು ಹೊಸತು ನಿಮರ್ಿಸಲು ಉದ್ದೇಶಿಸಿತ್ತಾದರೂ, ನಿಲ್ದಾಣದಲ್ಲಿ ಕಾಯರ್ಾಚರಿಸುತ್ತಿದ್ದ ವ್ಯಾಪಾರಿ ಮಾಲೀಕರು ನಿಲ್ದಾಣ ಬಿಟ್ಟು ತೆರಳಲು ಸಮ್ಮತಿಸದೆ ಪ್ರತಿಭಟಿಸಿದರು. ವಿವಾದ ತಾರಕಕ್ಕೇರಿ ರಾಜ್ಯ ಉಚ್ಚ ನ್ಯಾಯಾಲಯಕ್ಕೂ ದೂರು ನೀಡಲ್ಪಟ್ಟು ಬಳಿಕ ನ್ಯಾಯಾಲಯ ವ್ಯಾಪಾರಿಗಳ ಅಜರ್ಿಯನ್ನು ತಿರಸ್ಕರಿಸಿ ಗ್ರಾ.ಪಂ. ನಿಧರ್ಾರವನ್ನು ಎತ್ತಿಹಿಡಿದು ನಿಲ್ದಾಣ ಮುರಿಯಲು ಆದೇಶ ನೀಡಿದ್ದು, ಬುಧವಾರದಿಂದ ನಿಲ್ದಾಣವನ್ನು ಕೆಡವುವ ಪ್ರಕ್ರಿಯೆ ಆರಂಭಗೊಂಡಿದೆ.


