ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 22, 2017
ಮನಮೋಹನ್ ಸಿಂಗ್ಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖಜರ್ಿ ನೇತೃತ್ವದ ಆಯ್ಕೆ ಸಮಿತಿ ಮನಮೋಹನ್ ಸಿಂಗ್ ಅವರನ್ನು ಸವರ್ಾನುಮತದಿಂದ ಆಯ್ಕೆ ಮಾಡಿದೆ ಎಂದು ಇಂದಿರಾಗಾಂಧಿ ಮೆಮೊರಿಯಲ್ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
2004ರಿಂದ 2014ರ ಅವಧಿಯಲ್ಲಿ ದೇಶಕ್ಕೆ ನಾಯಕತ್ವ ನೀಡುವ ಮೂಲಕ ಜಾಗತಿಕವಾಗಿ ಭಾರತದ ಘನತೆಯನ್ನು ಹೆಚ್ಚಿಸಿರುವ ಮನಮೋಹನ್ ಸಿಂಗ್ ಅವರು, ಶಾಂತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ದೇಶದ ಆಥರ್ಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಿಂಗ್ ನೀಡಿರುವ ಕೊಡುಗೆ ಅಪಾರ ಎಂದು ಟ್ರಸ್ಟ್ ಕಾರ್ಯದಶರ್ಿ ಸುಮನ್ ದುಬೆ ತಿಳಿಸಿದ್ದಾರೆ.
ಎರಡು ಅವಧಿಗೆ ದೇಶವನ್ನು ಮುನ್ನಡೆಸಿದ ಮೂರನೇ ವ್ಯಕ್ತಿ ಮನಮೋಹನ್ ಸಿಂಗ್. ಅವರ ಅವಧಿಯಲ್ಲಿ ಅಮೆರಿಕದೊಂದಿಗೆ ಅಣು ಒಪ್ಪಂದ, ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದಗಳು ಬಹು ಮುಖ್ಯವಾದವು ಎಂದೂ ದುಬೆ ತಿಳಿಸಿದ್ದಾರೆ.


