ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 22, 2017
ಪನಾಮಾ: ಆರು ಕಂಪೆನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಪನಾಮಾ ದಾಖಲೆ ಸೋರಿಕೆ ಹಗರಣದಲ್ಲಿ ಸಿಲುಕಿರುವ ದೇಶದ ಆರಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಕಂಪೆನಿಗಳಿಗೆ ಹೊಸ ಸಂಕಷ್ಟ ಎದುರಾಗಿದೆ. ಆದಾಯ ತೆರಿಗೆ ಇಲಾಖೆ ಈ ಕಂಪೆನಿ ಮತ್ತು ವ್ಯಕ್ತಿಗಳ ವಿರುದ್ಧ ಕಪ್ಪುಹಣ ನಿಗ್ರಹ ಕಾಯಿದೆ ಅಡಿ ಕ್ರಿಮಿನಲ್ ದೋಷಾರೋಪ ಹೊರಿಸಿದೆ.
ತೆರಿಗೆರಹಿತ ದೇಶಗಳಲ್ಲಿ ಈ ಕಂಪೆನಿ ಮತ್ತು ವ್ಯಕ್ತಿಗಳು ಹೂಡಿರುವ ಬಂಡವಾಳ, ಆದಾಯ ಮತ್ತು ಹೊಂದಿರುವ ಸಂಪತ್ತಿನ ಬಗ್ಗೆ ತೆರಿಗೆ ಇಲಾಖೆ ಮೌಲ್ಯಮಾಪನ ಆರಂಭಿಸಿದೆ.
`ಕಪ್ಪುಹಣ ನಿಗ್ರಹ (ವಿದೇಶಗಳಲ್ಲಿರುವ ಅಘೋಷಿತ ಆಸ್ತಿ ಮತ್ತು ಆದಾಯ) ಮತ್ತು ತೆರಿಗೆ ವಿಧಿಸುವ ಕಾಯಿದೆ 2015' ಅಡಿ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಶೀಘ್ರ ಕ್ರಿಮಿನಲ್ ಕಾನೂನು ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅಘೋಷಿತ ಸಂಪತ್ತು ಕಂಡು ಬಂದಲ್ಲಿ ಶೇ 120ರಷ್ಟು ತೆರಿಗೆ ಮತ್ತು ದಂಡದ ಜತೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪನಾಮಾ ದಾಖಲೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಲ್ಲಿಯವರೆಗೆ ?792 ಕೋಟಿ ಮೊತ್ತದ ಅಘೋಷಿತ ಸಂಪತ್ತನ್ನು ಪತ್ತೆ ಹಚ್ಚಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇತ್ತೀಚೆಗೆ ಹೇಳಿತ್ತು.
* ಪನಾಮಾ ದಾಖಲೆ ಸೋರಿಕೆ ತನಿಖೆಗೆ ಕಳೆದ ಏಪ್ರಿಲ್ನಲ್ಲಿ ಹಲವು ತನಿಖಾ ಸಂಸ್ಥೆಗಳನ್ನು ಒಳಗೊಂಡ ತಂಡ (ಎಂಎಜಿ) ರಚನೆ
* ಸಕರ್ಾರಕ್ಕೆ ಏಳು ವರದಿ ಸಲ್ಲಿಸಿರುವ ಎಂಎಜಿ
* ಈ ಹಗರಣದಲ್ಲಿ ಕೇಳಿ ಬಂದ ಎಲ್ಲ 426 ಪ್ರಕರಣಗಳ ಬಗ್ಗೆಯೂ ತೆರಿಗೆ ಇಲಾಖೆ ವಿಚಾರಣೆ

