ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಕಾಟುಕುಕ್ಕೆ ಜಾತ್ರೆ ಪ್ರಯುಕ್ತ ಸ್ವಚ್ಛತಾ ಕಾರ್ಯ ನಡೆಸಿ ಮಾದರಿಯಾದ ಸಂಘಟನೆ
ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಜಾತ್ರೋತ್ಸವದ ಪ್ರಯುಕ್ತ ಮಂಗಳವಾರ ಶ್ರೀ ಆದಿಮಾಯೆ ಫ್ರೆಂಡ್ಸ್ ಕೆಂಗಣಾಜೆ ಇದರ ಸದಸ್ಯರಿಂದ ಕಾತರ್ಿಕೇಯ ಫ್ರೆಂಡ್ಸ್ ಕ್ಲಬ್ ಖಂಡೇರಿ ಇವರ ಸಹಕಾರದೊಂದಿಗೆ ಖಂಡೇರಿಯಿಂದ ಕಾಟುಕುಕ್ಕೆಯವರೆಗೆ ರಸ್ತೆ ಬದಿಯ ಹುಲ್ಲು ಗಿಡ ಗಂಟಿಗಳು ಹಾಗೂ ಕಸಕಡ್ಡುಗಳನ್ನು ತೆಗೆದು ಸ್ವಚ್ಛತಾ ಕಾರ್ಯ ನಿರ್ವಹಿಸಿದರು.
ಸುಂದರ ಕೆಂಗಣಾಜೆ, ಸುಕುಮಾರ, ಸಂತೋಷ, ರಮೇಶ, ನಾರಾಯಣ, ರಘು, ವಿಶ್ವನಾಥ ರೈ, ಚಂದ್ರಶೇಖರ ರೈ, ಕುಕ್ಕ ಹಾಗೂ ಹಲವರು ಭಾಗವಹಿಸಿ ಸ್ವಚ್ಚತಾ ಕಾರ್ಯಕ್ರಮದ ನೇತೃತ್ವ ವಹಿಸಿದರು.



