ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಶತಚಂಡಿಕಾ ಯಾಗ ಇಂದು ಪೂಣರ್ಾಹುತಿ
ಪೆರ್ಲ: ರಾಜಾಪುರ,ಬಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರ ಶ್ರದ್ದಾ ಕೇಂದ್ರವಾದ ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಮದ್ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನ ಹಾಗು ಉಪಸ್ಥಿತಿಯಲ್ಲಿ ನ. 19 ರಿಂದ ಆರಂಭಗೊಂಡಿರುವ ಶ್ರೀಶತಚಂಡಿಕಾ ಯಾಗದ ಪೂಣರ್ಾಹುತಿ ಇಂದು(ಗುರುವಾರ) ನಡೆಯಲಿದೆ.
ನ. 23 ರಂದು ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ ಸಹಿತ ವಿವಿಧ ವೈಧಿಕ ವಿಧಿವಿಧಾನಗಳು, 10ಕ್ಕೆ ಡಾ.ಶಾಂತಾರಾಮ ಪ್ರಭು ನಿಟ್ಟೂರು ರವರಿಂದ ಸತ್ಸಂಗ, 10.30ಕ್ಕೆ ಭಿಕ್ಷಾ ಸಂಕಲ್ಪ, ಭಜನೆ, 11 ಗಂಟೆಗೆ ಶತಚಂಡಿಯಾಗದ ಮಹಾಪೂಣರ್ಾಹುತಿ, ಮಹಾಪೂಜೆ, ಮಂಗಳಾರತಿ, 1 ಗಂಟೆಗೆ ಭವಾನಿ ಶಂಕರ ದೇವರ ಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಕ್ಕೆ ಮಂತ್ರಾಕ್ಷತೆ, ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತೀ ಶ್ರೀಗಳಿಂದ ಆಶೀರ್ವಚನ, ಪಾದಪೂಜೆ ನಡೆಯಲಿದೆ. ಧಾಮರ್ಿಕ ಸಭೆಯಲ್ಲಿ ಶತಚಂಡಿಯಾಗ ಸಮಿತಿ ಗೌರವಾಧ್ಯಕ್ಷ ಎಸ್. ಆರ್. ರಂಗಮೂತರ್ಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ ಸಹಿತ ವಿವಿಧ ಧಾಮರ್ಿಕ ವಿಧಿವಿಧಾನಗಳು, 10ಕ್ಕೆ ಭಜನೆ, 10.30ಕ್ಕೆ ಭಿಕ್ಷಾ ಸಂಕಲ್ಪ, ಪೂಣರ್ಾಹುತಿ, ಮಂಗಳಾರತಿ, 1 ಗಂಟೆಗೆ ಭವಾನಿಶಂಕರ ದೇವರ ಪೂಜೆ, ಪ್ರಸಾದ ವಿತರಣೆ, ಅಪರಾಹ್ನ 2ಕ್ಕೆ ಪಾದಪೂಜೆ ನಡೆಯಿತು. 3ಕ್ಕೆ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ದಾಸವಾಣಿ, 6ಕ್ಕೆ ಭಕ್ತಿಸಂಗೀತ, 7.30ಕ್ಕೆ ದುಗರ್ಾಪರಮೇಶ್ವರಿ ದೇವರಿಗೆ ರಂಗಪೂಜೆ, ಅಷ್ಟಾವಧಾನ ಸೇವೆ, ಭವಾನಿಶಂಕರ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


