ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಕೋಟೆಕ್ಕಾರ್ ಕಬೀರ್ ಮಹಿಸಂದಾಯ ದೈವಸ್ಥಾನ ಜೀಣರ್ೋದ್ಧಾರ ಸಮಿತಿ ರೂಪೀಕರಣ
ಕುಂಬಳೆ: ನೂರಾರು ವರ್ಷಗಳ ಇತಿಹಾಸವಿರುವ ಮೊಗೇರ ಸಮುದಾಯದವರು ಪೂಜಿಸಿಕೊಂಡು ಬರುತ್ತಿದ್ದ ಕೋಟೆಕ್ಕಾರು ಕಬೀರ ಶ್ರೀ ಮಹಿಸಂದಾಯ ಮತ್ತು ಪರಿವಾರ ದೈವಗಳ ದೈವಸ್ಥಾನವು ಕಳೆದ ಕೆಲವು ವರ್ಷಗಳಿಂದ ಅಜೀಣರ್ಾವಸ್ಥೆಯಲ್ಲಿದ್ದು ಇದೀಗ ಊರ ಪರವೂರ ಭಕ್ತಾದಿಗಳ ನೆರವಿನೊಂದಿಗೆ ಜೀಣರ್ೋದ್ಧಾರ ಪ್ರಕ್ರಿಯೆ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜೀಣರ್ೋದ್ಧಾರ ಸಮಿತಿಯನ್ನು ರೂಪಿಸಿದ್ದು ಗೌರವಧ್ಯಕ್ಷರಾಗಿ ಬ್ಲಾಕ್ ಪಂಚಾಯತಿ ಕುಂಬಳೆ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಅಧ್ಯಕ್ಷರಾಗಿ ರಾಮಚಂದ್ರ ಗಟ್ಟಿ ಕೋಟೆಕ್ಕಾರು, ಉಪಾಧ್ಯಕ್ಷರಾಗಿ ತ್ಯಾಂಪಣ್ಣ ರೈ ಮತ್ತು ಈಶ್ವರ ಕೋಟೆಕ್ಕಾರು, ಪ್ರಧಾನ ಕಾರ್ಯದಶರ್ಿಯಾಗಿ ನಾರಾಯಣ.ಪಿ.ಪೆರಡಾಲ, ಕಾರ್ಯದಶರ್ಿಯಾಗಿ ರಾಜೇಶ್ ಕೋಟೆಕ್ಕಾರು, ಬೇಬಿ ಕೋಟೆಕ್ಕಾರು, ಕೋಶಾಧಿಕಾರಿಯಾಗಿ ಹರೀಶ್ ಗಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಕುಂಬ್ಡಾಜೆ ಗ್ರಾಮ ಪಂ.ಉಪಾಧ್ಯಕ್ಷ ಆನಂದ ಮವ್ವಾರ್, ಬದಿಯಡ್ಕ ಗ್ರಾ,ಪಂ.ಸದಸ್ಯ ಶಂಕರ.ಡಿ.ದಬರ್ೆತ್ತಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಕುತ್ಯಾಳ ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಪ್ರ.ಕಾರ್ಯದಶರ್ಿ ಹರೀಶ್ ಬಲ್ಲಂಪಾಡಿ, ರಾಮಪ್ಪ ಮಂಜೇಶ್ವರ, ಕೃಷ್ಣ.ಡಿ.ಧಬರ್ೆತ್ತಡ್ಕ, ಕೃಷ್ಣದಾಸ್ ಧಬರ್ೆತ್ತಡ್ಕ ಮತ್ತು ಭಾರ್ಗವ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಕ್ಷಾ ಕೋಟೆಕ್ಕಾರ್ ಇದರ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
2018ರ ಎಪ್ರಿಲ್ ತಿಂಗಳಿನಲ್ಲಿ ಶ್ರೀ ಮಹಿಸಂದಾಯ ಹಾಗೂ ಪರಿವಾರ ದೈವಗಳ ಬ್ರಹ್ಮಕಲಶ ನಡೆಸುವುದಾಗಿ ಸಭೆಯಲ್ಲಿ ತೀಮರ್ಾನಿಸಲಾಯಿತು.
ನಾರಾಯಣ ಪಿ.ಪೆರಡಾಲ ಸ್ವಾಗತಿಸಿ, ರಾಜೆಶ್ ಕೋಟೆಕ್ಕಾರು ವಂದಿಸಿದರು.

