HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಪಿಲಿಕುಳ ತುಳು ಸಂಸ್ಕೃತಿ ಗ್ರಾಮದಲ್ಲಿ ಇಂದಿನಿಂದ ತುಳುನಾಡೋಚ್ಚಯ 2017
    ಮಂಗಳೂರು : ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮ ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರುಇದರ ಸಹಯೋಗದೊಂದಿಗೆ ಸಹಕಾರದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ``ತುಳುನಾಡೋಚ್ಚಯ 2017''``ತುಳುನಾಡಿನಲ್ಲಿ ಜಾತಿ,ಮತ,ಧರ್ಮದ ಜನಮೈತ್ರಿ'' ಎಂಬ ಬೃಹತ್ ಕಾರ್ಯಕ್ರಮ ಇಂದು ಹಾಗೂ ನಾಳೆ ಪಿಲಿಕುಳ ತುಳು ಸಂಸ್ಕೃತಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯತೆಯನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕೃತಿಯನ್ನು ಇನ್ನಷ್ಟು ಬಲಪಡಿಸುವುದು ``ತುಳುನಾಡೋಚ್ಚಯ 2017''ರ ಮೂಲ ಉದ್ದೇಶವಾಗಿದೆ. ಅಲ್ಲದೆ ಪಿಲಿಕುಳದ ತುಳುಸಂಸ್ಕೃತಿ ಗ್ರಾಮದ ಅಭಿವೃದ್ಧಿ ಮತ್ತು ಹೆಚ್ಚಿನ ಜನಾಕರ್ಷಣೆ ಸೆಳೆಯಲು ಈ ಗ್ರಾಮವನ್ನು ಸಮ್ಮೇಳನ ನಗರಿಯನ್ನಾಗಿಸಿ ವಿವಿಧ ಕಡೆಗಳಲ್ಲಿ ದಿನಪೂತರ್ಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
   ಇಂದು  ``ತುಳುನಾಡೋಚ್ಚಯ''ದಲ್ಲಿ ತುಳು ಭಾಷಾ ಸಂಸ್ಕೃತಿಯ ಹಾಗೂ ಜಾತಿ,ಮತ,ಭಾಷಾ ಸೌಹಾರ್ದತೆಯನ್ನು ಮೇಳೈಸುವ ಹಾಗೂ ಜಾತಿ,ಮತ,ಭಾಷೆ ಒಗ್ಗಟ್ಟನ್ನು ಪ್ರದಶರ್ಿಸುವ  ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆ ಅಲ್ಲದೆ ವಸ್ತು ಪ್ರದರ್ಶನ,ಜಾನಪದ ಪ್ರದರ್ಶನ, ಕೊಸ್ಟಲ್ ವುಡ್ ಸಿನಮಾ ಕೂಟ, ಕುಲ ಕಸುಬು ಪ್ರದರ್ಶನ, ತಿಂಡಿ ತಿನಸುಗಳ ಪ್ರದರ್ಶನ ಜರಗಲಿದೆ. ಅಲ್ಲದೆ ತುಳು ಬಾಷೆಯ ಸಂಸ್ಕೃತಿಗೆ, ಹಾಗೂ ಜಾತಿ, ಮತ, ಬಾಸೆ ಒಗ್ಗಟ್ಟಿಗೆ ಹೆಗಲುಕೊಟ್ಟ ಗಣ್ಯರನ್ನು ಸನ್ಮಾನಿಸಲಾಗುತ್ತದೆ.
   ತುಳುರತ್ನ ಬಿದರ್್: ಈ ಸಂದರ್ಭದಲ್ಲಿ ಹಿರಿಯ ಕಾದಂಬರಿಕಾರ,ನಾಟಕಗಾರ,ಸಾಹಿತಿ ಡಾ.ಡಿ.ಕೆ.ಚೌಟ, ಹಿರಿಯ ಬರಹಗಾತರ್ಿ ,ಸಂಘಟಕಿ ಡಾ.ಸುನೀತಾ ಎಂ ಶೆಟ್ಟಿ ಮುಂಬೈ, ಸಿರಿಪಾಡ್ದನ ಕಲಾವಿದ ಗೋಪಾಲ ನಾಯಕ್ ಮಾಚಾರ್ ಅವರಿಗೆ ಈ ಬಾರಿಯ ತುಳುರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
    ಕಾರ್ಯಕ್ರಮದ ವಿವರ: ಇಂದು
    ಬೆಳಿಗ್ಗೆ ಗಂಟೆ 9-00ಕ್ಕೆಧ್ವಜಾರೋಹಣ ಜರಗಲಿದ್ದು 9-30 ಬಳಿಕ ಸಮ್ಮೇಳನ ನಗರಿಯಲ್ಲಿರುವ ವಸ್ತು ಪ್ರದರ್ಶನ, ತಿಂಡಿ ತಿನಿಸ್ಗಳ ಪ್ರದರ್ಶನ( ಆಹಾರೋತ್ಸವ) ಕೃಷಿ ವಸ್ತು ಪ್ರದರ್ಶನ    ಕುಲಕಸುಬು ಪ್ರದರ್ಶನ, ಪುಸ್ತಕ  ಪ್ರದರ್ಶನೊ,ಸಂಸ್ಕೃತಿ ಪ್ರದರ್ಶನ, ವ್ಯಾಪಾರ ಮಳಿಗೆ ಪ್ರದರ್ಶನ, ಚಿತ್ರ ಹಾಗೂ ಛಾಯಾ ಚಿತ್ರ ಪ್ರದರ್ಶನ, ನಾಡಮದ್ದು ಪ್ರದರ್ಶನ, ಮಾಹಿತಿ-ಮಾಧ್ಯಮ -ವಿಕಿಪೀಡಿಯ ಕೇಂದ್ರ, ಯಂತ್ರೋಪಕರಣ ಪ್ರದರ್ಶನ, ಪುಷ್ಟೋದ್ಯಾನ ಪ್ರದರ್ಶನದೊಂದಿಗೆ ವಿವಿಧ ಪ್ರದರ್ಶನಗಳ ಉದ್ಘಾಟನೆ ಜರಗಲಿದೆ.
ಬೆಳಿಗ್ಗೆ 10 ಗಂಟೆಗೆ ವಾಮಂಜೂರುವಿನಿಂದ ಹೊರಟು  ಪಿಲಿಕುಳದ ಸಮ್ಮೇಳನ ನಗರಿಗೆ ತುಳುನಾಡ ಜನಮೈತ್ರಿ ಜನಪದ ಸಿರಿ ಮೆರವಣಿಗೆ ವಿವಿಧ ಸಮುದಾಯದ ಸಂಸ್ಕೃತಿ,ಉಡುಗೆ ತೊಡುಗೆಗಳ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಸ್ತಬ್ದ ಚಿತ್ರ, ಗೊಂಬೆಯಾಟ, ಸಿಂಗಾರಿಮೇಳ, ಚೆಂಡೆಮೇಳ, ಪೂಕಾವಡಿ, ಪಂಚವಾದ್ಯಮೇಳ ,ಬೇರೆ ಬೇರೆ ರಾಜ್ಯಗಳ ಜನಪದ ಪ್ರದರ್ಶನ ಜನಪದ ಸಿರಿ ಮೆರೆವಣಿಗೆ ವಿಶೇಷ ಆಕರ್ಷಣೆಯಾಗಿರುತ್ತದೆ.ಮದ್ಯಾಹ್ನ 12 ಗಂಟೆಗೆ ತುಳುನಾಡೋಚ್ಚಯ 2017 ಉದ್ಘಾಟನೆ ಜರಗಲಿದ್ದು ಇದರಲ್ಲಿ ಸಾಹಿತ್ಯ,ಸಾಮಾಜಿಕ ರಾಯಭಾರಿಗಳು,ಕೇಂದ್ರ,ಹಾಗೂ ಕನರ್ಾಟಕದ ಸಚಿವರು ಭಾಗವಹಿಸುವರು. ತುಳು ಕಾಲಕೋಂದೆ, ವಿವಿಧ ಪುಸ್ತಕ,ಸಿಡಿಗಳ ಬಿಡುಗಡೆ ನಡೆಯಲಿದೆ.ಸಂಜೆ 4.00ಗೆ ದೇಶ ವಿದೇಶದ ತುಳುವರಿಗೆ ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವ ಹೊರದೇಶ- ಹೊರರಾಜ್ಯತುಳುವರ ಮಿನದನ ಸಮ್ಮೇಳನ ಹಾಗೂ ಹೊರ ದೇಶದಲ್ಲಿರುವ ಊರ ಸಾಧಕರಿಗೆ ಪ್ರಶಸ್ತಿ ಪ್ರದಾನ ಜರಗಲಿದೆ.ರಾತ್ರೆ 7-00ಗೆ ತುಳು,ಕನ್ನಡ,ಮಲಯಾಳ, ತಮಿಳು, ತೆಲುಗು ಭಾಷೆಗಳ ಜನಪದ ಪ್ರದರ್ಶನದ ದ್ರಾವಿಡೋತ್ಸವ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಕಲೆಗಳು ಪ್ರದರ್ಶನಗೊಳ್ಳಲಿದೆ.
ರಾತ್ರೆ 8.00ರಿಂದ ಸುಮನಸ ಕೊಡವೂರು ಇವರಿಂದ ಕೋಟಿಚೆನ್ನಯೆ ತುಳು ನಾಟಕ ಪ್ರದರ್ಶನಗೊಳ್ಳುವುದು.
   ನಾಳೆ:
   ಬೆಳಿಗ್ಗೆ 9-30ಗಂಟೆಯಿಂದ  ತುಳುನಾಡಿನ ದೈವಾರಧನೆಯ ಬಗ್ಗೆ ವಿಚಾರಗೋಷ್ಠಿ,ದೈವಾರಾಧಕರಿಗೆ ಸನ್ಮಾನಗಳ
ದೈವಾರಾಧಕೆರೆ ಕೂಟ ಎಂಬ ಕಾರ್ಯಕ್ರಮ ಜರಗಲಿದೆ.ಮಧ್ಯಾಹ್ನ 12 ಗಂಟೆಗೆ ಮೂರು ಮಂದಿ ಸಾಧಕರಿಗೆ ತುಳುರತ್ನ ಪ್ರಶಸ್ತಿ ಪ್ರದಾನ ಜತೆಗೆ ವಿವಿಧ ಸಾಧಕರಿಗೆ ಸನ್ಮಾನ,ಮಧ್ಯಾಹ್ನ 2 ಗಂಟೆಗೆ ತುಳುಭಾಷಾ ಪ್ರಾದೇಶಿಕ ವೈವಿಧ್ಯತೆಗಳ ಬಗ್ಗೆ ವಿಚಾರಗೋಷ್ಠಿ ಸಾರ ಎಸಳ್ದ ತಾಮರೆ ಜರಗಲಿದೆ.ಇದರಲ್ಲಿ ಕುಂದಾಪುರ, ಶಿವಳ್ಳಿ, ಉಡುಪಿ, ಮೂಡಬಿದ್ರೆ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಸುಳ್ಯ,ಮಡಿಕೇರಿ, ಮಹಾರಾಷ್ಟ್ರ, ಕಾಸರಗೋಡು, ತುಳು ಭಾಷಾ ವೈವಿಧ್ಯತೆಗಳ ಬಗ್ಗೆ ವಿಚಾರ ವಿಮಶರ್ೆ ನಡೆಯಲಿದೆ. ಸಂಜೆ 3-00ಗಂಟೆಗೆ  ಜನಮೈತ್ರಿ ಸಂಗಮ ಹಾಗೂ  ಸಮಾರೋಪ ಸಮಾರಂಭ ತುಳುನಾಡಿನ ವಿವಿಧ ಸಮುದಾಯ, ಧರ್ಮ, ಭಾಷೆಗಳ ಜತೆ ಸೇರಿ ಐದು ಮಂದಿ ಜನಮೈತ್ರಿಗೆ ಪ್ರಸಿದ್ಧರಾದ ಗಣ್ಯರಿಗೆ ಜನಮೈತಿ ಪ್ರಶಸ್ತಿ ಅಲ್ಲದೆ ವಿವಿಧ ಸಮುದಾಯದ ಹಿರಿಯ ಸಾಧಕರಿಗೆ ಪುರಸ್ಕಾರವನ್ನು ಈ ಸಂದರ್ಭದಲ್ಲಿ ಪ್ರದಾನಿಸಲಾಗುವುದು.
ಜನಮೈತ್ರಿ ಪ್ರಶಸ್ತಿ : ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ನ ಆಡಳಿತ ನಿದರ್ೆಶಕ ಡಾ.ಎಂ.ಎನ್. ರಾಜೇಂದ್ರ ಕುಮಾರ್,ಎ.ಜೆ.ಶೆಟ್ಟಿ ಮಂಗಳೂರು, ಮಾಟರ್ಿನ್ ಅರಾನ್ಹಾ, ಸುಧೀರ್ ಕುಮಾರ್ ಶೆಟ್ಟಿ ಯು.ಎ.ಇ., ಎಂ.ಇ.ಮೂಳೂರು ಅವರಿಗೆ 2017ರ ಜನಮೈತ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಂಜೆ 6-00 ಗಂಟೆಯಿಂದ ಕೋಸ್ಟಲ್ವುಡ್ ಸಿನಿಮಾ ಹಬ್ಬ
ತುಳು, ಕನ್ನಡ, ಕೊಂಕಣಿ, ಬ್ಯಾರಿ ಸಿನಿಮಾದ ಗಣ್ಯರು ಮೇಳೈಸುವ ವಿಶೇಷ ಸಮಾರಂಭ ಕೋಸ್ಟಲ್ವುಡ್ ಸಿನಿಮಾ ಬಗ್ಗೆ ವಿಚಾರಗೋಷ್ಠಿ, ಸಿನಿಮಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries