ಇಂದು ಫಲಿಮಾರು ಶ್ರೀಗಳ ಕಾಸರಗೋಡು ಪ್ರವಾಸ
ಮುಳ್ಳೇರಿಯ: ಪ್ರತಿ 2 ವರ್ಷಗಳಿಗೊಮ್ಮೆ ಉಡುಪಿಯಲ್ಲಿ ನಡೆಯುವ ಪಯರ್ಾಯ ಉತ್ಸವದಲ್ಲಿ ಈ ಬಾರಿ ಪಯರ್ಾಯ ಪೀಠವನ್ನು ಅಲಂಕರಿಸುವ ಫಲಿಮಾರು ಮಠದ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಪಯರ್ಾಯ ಪೂರ್ವಭಾವಿ ತೀರ್ಥಕ್ಷೇತ್ರ ಸಂದರ್ಶನದ ಭಾಗವಾಗಿ ಕಾಸರಗೋಡಿಗೆ ಆಗಮಿಸಲಿದ್ದಾರೆ. ಡಿ.22 ಶುಕ್ರವಾರದಂದು ಸಂಜೆ 5 ಗಂಟೆಗೆ ಕುಂಬಳೆ ಸೀಮೆಯ ಪ್ರಥಮವಂದ್ಯ ದೇವನಾದ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಸನ್ನಿಧಿಗೆ ಆಗಮಿಸಲಿರುವರು.
ಬಳಿಕ ಕುಂಟಾರು ಶ್ರೀ ಮಹಾವಿಷ್ಣುಕ್ಷೇತ್ರದ ಪರಿಸರದಲ್ಲಿ ಪಯಸ್ವಿನಿ ಪುಣ್ಯಸ್ನಾನ ಮಾಡಿ ಕುಂಟಾರು ಕ್ಷೇತ್ರವನ್ನು ಸಂದಶರ್ಿಸಲಿದ್ದಾರೆ. ಈ ಸಮಯದಲ್ಲಿ ಶ್ರೀಗಳಿಗೆ ಊರ ಭಕ್ತಬಂಧುಗಳಿಂದ ಮತ್ತು ಕುಂಟಾರು ತಂತ್ರಿಗಳವರಿಂದ ಗೌರವಾರ್ಪಣೆ ನಡೆಯಲಿದೆ. ತದನಂತರ ಮಧೂರು ಕ್ಷೇತ್ರವನ್ನು ಸಂದಶರ್ಿಸಿ ಕಾವುಗೋಳಿ ಮಠಕ್ಕೆ ತೆರಳಿ ಅಲ್ಲಿಂದ ಕಾಸರಗೋಡಿನ ಖ್ಯಾತ ಉದ್ಯಮಿ ರಾಂ ಪ್ರಸಾದ್ ಅವರ ಮನೆಯಲ್ಲಿ ರಾತ್ರಿಪೂಜೆಯನ್ನು ನೆರವೇರಿಸಿ ಭಕ್ತಜನರನ್ನುದ್ದೇಶಿಸಿ ಆಶೀರ್ವಚನ ನೀಡುವರು. ರಾತ್ರಿ ಶ್ರೀ ಮದ್ ಎಡನೀರು ಮಠದಲ್ಲಿ ಮೊಕ್ಕಾಂ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಜನರು ಸಹಕರಿಸಬೇಕಾಗಿ ಶ್ರೀಗಳ ಕಾಸರಗೊಡು ಪ್ರವಾಸದ ವ್ಯವಸ್ಥಾಪನಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.