ಪಾಕಿಸ್ತಾನದಿಂದ 881 ಬಾರಿ ಕದನ ವಿರಾಮ ಉಲ್ಲಂಘನೆ; ಲೋಕಸಭೆಗೆ ಸಕರ್ಾರದ ಮಾಹಿತಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ತಾನ ಒಟ್ಟು 881 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 30 ಜನರು ಸಾವಿಗೀಡಾಗಿದ್ದಾರೆ.
ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹಂಸರಾಜ್ ಆಹಿರ್ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು. ಡಿ.10ರ ವರೆಗೂ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ 771 ಬಾರಿ ಹಾಗೂ ನವೆಂಬರ್ ಅಂತ್ಯದ ವರೆಗೂ ಅಂತರರಾಷ್ಟ್ರೀಯ ಗಡಿಯಲ್ಲಿ 110 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವುದಾಗಿ ತಿಳಿಸಿದರು.
ಅಪ್ರಚೋದಿತ ಗುಂಡಿನ ದಾಳಿಯಲ್ಲಿ 14 ಸೇನಾ ಸಿಬ್ಬಂದಿ, 12 ನಾಗರಿಕರು ಹಾಗೂ ನಾಲ್ವರು ಬಿಎಸ್ಎಫ್ ಸಿಬ್ಬಂದಿ ಹತ್ಯೆಯಾಗಿದೆ ಎಂದು ಮಾಹಿತಿ ನೀಡಿದರು. ಪಾಕಿಸ್ತಾನದೊಂದಿಗೆ ಭಾರತ 3,323 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿದೆ. ಇದರಲ್ಲಿ 221 ಕಿ.ಮೀ. ಅಂತರರಾಷ್ಟ್ರೀಯ ಗಡಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಎಲ್ಒಸಿ 740 ಕಿ.ಮೀ. ವಿಸ್ತರಿಸಿದೆ.
2016ರಲ್ಲಿ 449 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದು, 13 ನಾಗರಿಕರು, 13 ಭದ್ರತಾ ಸಿಬ್ಬಂದಿ ಹತ್ಯೆಯಾಗಿತ್ತು. 83 ನಾಗರಿಕರು ಹಾಗೂ 99 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.