ಚಿಕಿತ್ಸೆಯ ಜೊತೆಗೆ ಪ್ರೀತಿಯ ಅರೈಕೆ ಪರಿಣಾಮಕಾರಿ-ಕೆ.ಎನ್.ಕೃಷ್ಣ ಭಟ್.
ಬದಿಯಡ್ಕ: ರೋಗಿಗಳಿಗೆ ರೋಗ ಚಿಕಿತ್ಸೆಯ ಜೊತೆಗೆ ಪ್ರೀತಿಯ ಆರೈಕೆ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಶೀಘ್ರ ಗುಣಮುಖರಾಗುವಲ್ಲಿ ನಾವು ತೊರಿಸುವ ಕಾಳಜಿ ಮತ್ತು ಅವರೊಂದಿಗಿನ ಒಡನಾಟ ಮಹತ್ವಪೂರ್ಣವಾದುದು ಎಂದು ಬದಿಯಡ್ಕ ಗ್ರಾಮ ಪಂಚಾಯತು ಅದ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕ ಗ್ರಾಮ ಪಂಚಾಯತು ಮತ್ತು ಸಮುದಾಯ ಆರೋಗ್ಯ ಕೇಂದ್ರ ಬದಿಯಡ್ಕ ಇದರ ಆಶ್ರಯದಲ್ಲಿ ಪಾಲಿಯೇಟಿವ್ ರೋಗಿ-ಮಿತ್ರ ಸಂಗಮ ಬದಿಯಡ್ಕದ ಗುರುಸದನದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ತ್ರಿಸ್ತರ ಪಂಚಾಯತು ಮತ್ತು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಜನರ ಸಹಕಾರದೊಂದಿಗೆ ಜಾರಿಗೊಳಿಸಿದ ಸಾಂತ್ವನ ಶುಶ್ರೂಶೆ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸೈಬುನ್ನಿಸಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಂ ಪ್ರಸಾದ್ ಮಾನ್ಯ, ಹಿರಿಯ ಫಿಸಿಯೋತೆರಪಿಸ್ಟ್ ಗಿರೀಶ್, ರಂಜುಷಾ ನಾಯರ್ ಮೊದಲಾದವರು ಉಪಸ್ಥಿತರಿದ್ದರು. ಪಾಲಿಯೇಟಿವ್ ದಾದಿ ಸವಿತ ವರದಿ ಮಂಡಿಸಿದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಡಾ.ಸತ್ಯಶಂಕರ್ ಸ್ವಾಗತಿಸಿ, ಆರೋಗ್ಯ ಪರಿವೀಕ್ಷಕ ಸಾಬು ಜೋಜರ್್ ವಂದಿಸಿದರು.ಬಳಿಕ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು.ಸಮಾರಂಭದಲ್ಲಿ ರೋಗಿಗಳಿಗೆ ಒದಗಿಸಲಾದ ವೀಲ್ಚೆಯರ್ ಗಳನ್ನು ವಿತರಿಸಲಾಯಿತು.