ಬಳಿಕ ಮುಂದೇನು?-ಮಾಹಿತಿ ಶಿಬಿರ
ಮಂಜೇಶ್ವರ: ಕನಿಲ ಶ್ರೀಭಗವತಿ ಸೇವಾ ಸಂಘದ ಆಶ್ರಯದಲ್ಲಿ ಹತ್ತನೇ ತರಗತಿಯ ಬಳಿಕ ಮುಂದೇನು-ಹಾಗೂ ಉದ್ಯೋಗ ಮಾಹಿತಿ ಶಿಬಿರ ಡಿ. 23 ಮತ್ತು 24 ರಂದು ಕನಿಲ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭ ದುಡಿಮೆಯ ನಾನಾ ಮುಖಗಳ ಛಾಯಾ ಚಿತ್ರ ಪ್ರದರ್ಶನ ಮತ್ತು ಉದ್ಯೋಗ ಸಾಹಿತ್ಯ ಹಾಗೂ ವೃತ್ತಿ ನುಡಿಮುತ್ತು ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ.
ಭಗವತಿ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮಚ್ಚೇಂದ್ರ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಅನಂತ ಉದ್ಘಾಟಿಸುವರು. ಶ್ರೀಭವತಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಲಕ್ಷ್ಮಣ ಟಿ.ಸಾಲಿಯಾನ್, ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಮಾಧವ, ನಿವೃತ್ತ ಪ್ರಾಂಶುಪಾಲ ಗಂಗಾಧರ ಬನಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುವರು. ಅಂಕೋಲದ ನಿವೃತ್ತ ಉದ್ಯೋಗ ವಿನಿಮಯ ಸಹಾಯಕ ಉಪನಿದರ್ೇಶಕ ಯು.ಎಂ.ಸಿಸರ್ಿಕರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬಹುದೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.