ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ
ಮುಳ್ಳೇರಿಯ : ಶ್ರೀ ಧರ್ಮಚಕ್ರ ಟ್ರಸ್ಟ್ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಜುಂಗಾವು ಹಾಗೂ
ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯ ಮವ್ವಾರು ಹಾಗೂ ಕೇರಳ ಹಿರಿಯ ನಾಗರಿಕರ ವೇದಿಕೆ ಮವ್ವಾರು ಘಟಕ, ಇವರ ಸಂಯುಕ್ತ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು ಮವ್ವಾರು ಷಡಾನನ ಯುವಕ ಸಂಘದ ಕಾಯರ್ಾಲಯದಲ್ಲಿ ಇತ್ತೀಚೆಗೆ ನಡೆಯಿತು.
ಹಿರಿಯ ಅಭಿಯಂತರ ಕೆ.ನಾರಾಯಣ ಭಟ್ ಬೆಳ್ಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಮವ್ವಾರು ಇದರ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಾಗ ಆರೋಗ್ಯವಂತ ಸಮಾಜ ನಿಮರ್ಾಣ ಸಾಧ್ಯ, ಒಂದು ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರುವ ಸಂಸ್ಥೆ ಇದೆ ಎಂದರೆ ಅದು ಹೆಮ್ಮೆಯ ವಿಚಾರ. ನಮ್ಮ ಅವಯವಗಳಲ್ಲಿ ಕಣ್ಣು ಬಹಳ ಪ್ರಧಾನವಾದುದು . ಕಣ್ಣಿನ ಸಂರಕ್ಷಣೆಯು ನಮ್ಮ ಆದ್ಯತೆಯಾಗಿರಬೇಕು ಎಂದು ಅವರು ಹೇಳಿದರು.
ಹಿರಿಯ ನಾಗರಿಕರ ವೇದಿಕೆ ಮವ್ವಾರು ಘಟಕದ ಕಾರ್ಯದಶರ್ಿ ವೆಂಕಟ್ರಮಣ ಭಟ್ ಶ್ರೀಕುಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮವ್ವಾರು ಷಡಾನನ ಯುವಕ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಉಪಸ್ಥಿತರಿದ್ದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಸೀತಾರಾಮ ಕುಂಜತ್ತಾಯ ಸ್ವಾಗತಿಸಿ, ಕಾರ್ಯದಶರ್ಿ ಸದಾಶಿವ ಚೆಟ್ಟಿಯಾರ್ ವಂದಿಸಿದರು. ಉಪಾಧ್ಯಕ್ಷ ಎಂ.ಗಂಗಾಧರ ರೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನಾಗರಿಕರ ವೇದಿಕೆ ಮವ್ವಾರು ಘಟಕ ಉಪಾಧ್ಯಕ್ಷ ಅಳಿಕೆ ಸುಬ್ರಹ್ಮಣ್ಯ ಭಟ್ ಪ್ರಾರ್ಥನೆ ಹಾಡಿದರು.
ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ನೇತ್ರ ತಜ್ಞರಾದ ಡಾ. ಆನಂದರ ನೇತೃತ್ವದ ವೈದ್ಯಕೀಯ ತಂಡ ಸುಮಾರು 126 ಮಂದಿಯ ನೇತ್ರ ತಪಾಸಣೆ ಮಾಡಿದರು. 30 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಶಿಪಾರಸು ಮಾಡಿದರು. ಶಿಬಿರದಲ್ಲಿ ವೈದ್ಯರು ಶಿಪಾರಸು ಮಾಡಿದ ರೋಗಿಗಳಿಗೆ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಜುಂಗಾವು ಇಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು.