ಅಧಿಕಾರಿಗಳ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಪಾಕ್ ಪ್ರಯತ್ನ ವಿಫಲಗೊಳಿಸಿದ ಭಾರತ!
ಗೌಪ್ಯ ಮಾಹಿತಿಗಾಗಿ ಭಾರತದ ಮೂವರು ಅಧಿಕಾರಿಗಳಿಗೆ ಬಲೆ ಬೀಸಿದ್ದ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ
ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡುವ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಲು ಹೂಡಿದ್ದ ಕುತಂತ್ರವನ್ನು ಭಾರತೀಯ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.
ಭಾರತಕ್ಕೆ ಸಂಬಂಧಿಸಿದ ಅಮೂಲ್ಯ ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಭಾರತೀಯ ಹೈ ಕಮೀಷನ್ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಯತ್ನಿಸಿತ್ತು. ಆದರೆ ಐಎಸ್ಐನ ಈ ಸಂಚನ್ನು ಗ್ರಹಿಸಿದ ಭಾರತೀಯ ಅಧಿಕಾರಿಗಳು ಇಲ್ಲಿ ಇರುವ ಅಧಿಕಾರಿಗಳಿಗೆ ಇದರ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭ್ಯವಾದ ಕೂಡಲೇ ಅಧಿಕಾರಿಗಳು ದೆಹಲಿಗೆ ಮರಳಿದ್ದು, ಯಾವುದೇ ನೆರೆ ರಾಷ್ಟ್ರಕ್ಕೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಎನ್ನಲಾಗಿದೆ. ಸದ್ಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆಗೆ ಒಳಪಟ್ಟಿರುವ ಅಧಿಕಾರಿಗಳು ಯಾವುದೇ ತಪ್ಪು ಹಜ್ಜೆ ಇಟ್ಟಿಲ್ಲ ಮತ್ತು ವಿಚಾರಣೆಯನ್ನು ಮುಂದುವರೆಸಲು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಮೂವರು ಅಧಿಕಾರಿಗಳ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಪ್ರಸ್ತುತ ಪಾಕಿಸ್ತಾನದ ಸಂಚಿಗೆ ತುತ್ತಾಗಿರುವ ಅಧಿಕಾರಿಗಳನ್ನು ಮತ್ತೆ ಕರ್ತವ್ಯ ನಿರ್ವಹಿಸಲು ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ