HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಯೋಗ ಹುಟ್ಟಿದ್ದು ಶಿವನಿಂದ,ಲೋಕಕ್ಕೆ ಪಸರಿಸಿದವ ಪತಂಜಲಿ
     ಕುಂಬಳೆ: ಮುಜುಂಗಾವಿನ ಶ್ರೀಭಾರತೀವಿದ್ಯಾಪೀಠದಲ್ಲಿ ವಿಶ್ವಯೋಗ ದಿನವನ್ನು ಗ್ರಾಮೋತ್ಥಾನ ಸಮಿತಿಯ ಸಹಯೋಗದೊಂದಿಗೆ ಆಚರಿಸಲಾಯಿತು.
  ಅಭ್ಯಾಗತರಾಗಿ ಆಗಮಿಸಿದ ಕಾಸರಗೋಡಿನ ಐ.ಎ.ಡಿ.ಇನ್ಟಿಟ್ಯೂಟಿನ ಡಾ. ಗುರುಪ್ರಸಾದ್ ಮಾತನಾಡಿ 'ಯೋಗ' ಎಂಬುದು ಕೈಲಾಸಪತಿ ಪರಮೇಶ್ವರನಿಂದ ಹುಟ್ಟಿ, ಅದನ್ನು ಲೋಕಕ್ಕೆ ಪ್ರಚುರಪಡಿಸಿದವ ಪತಂಜಲಿಮುನಿ. ಆದುದರಿಂದ ಅದು ಅತ್ಯಂತ ಪ್ರಾಚೀನತೆಯೂ ಉತ್ಕೃಷ್ಟತೆಯಿಂದ ಕೂಡಿದದೂ ಆಗಿ ದೇವಕೊಡುಗೆಯಾಗಿದೆ ಎಂದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಿರೋಗಿಯಾಗಬೇಕಾದರೆ ಯೋಗಾಭ್ಯಾಸ ಅತ್ಯಂತ ಉಪಯುಕ್ತ ಎಂದರು. ಆಡಳಿತಾಧಿಕಾರಿ ಶ್ಯಾಮ ಭಟ್ ದಬರ್ೆಮಾರ್ಗ  ಮಾತನಾಡಿ ಪ್ರಾಣಾಯಾಮ ಹಾಗೂ ಧ್ಯಾನಗಳಿಗಾಗಿ ಮಕ್ಕಳು ತಮ್ಮ ದಿನಚರಿಯಲ್ಲಿ ನಿಶ್ಚಿತ ವೇಳೆಯನ್ನು ನಿಗದಿಪಡಿಸಿಕೊಳ್ಳ ಬೇಕು. ಇದು ದೈಹಿಕ ಆರೋಗ್ಯದ ಜೊತೆಗೆ ಭೌದ್ದಿಕ ಬೆಳವಣಿಗೆಗೆ ಪೂರಕವಾಗುವುದು ಎಮದು ತಿಳಿಸಿದರು.
   ಗ್ರಾಮೋತ್ಥಾನ ಸಮಿತಿಯ ಸಂಯೋಜಕ ಜೀವನ್,ಮುಖ್ಯೋಪಾಧ್ಯಾಯಿನಿ  ಚಿತ್ರಾಸರಸ್ವತಿ ಪೆರಡಾನ,ಕಾರ್ಯಕ್ರಮ ಸಂಯೋಜಕ ಅವಿನಾಶ್ ಮುಜುಂಗಾವು ಉಪಸ್ಥಿತರಿದ್ದು ಶುಭಾಶಂಸನೆಗೈದರು.ಶಾಲೆಯ ಯೋಗ  ಅಧ್ಯಾಪಿಕೆ ಕು.ಕೀತರ್ಿಶ್ರೀ ಮಕ್ಕಳಿಂದ ಯೋಗಾಸನಗಳನ್ನು ಮಾಡಿಸಿದರು.
ವಿದ್ಯಾಥರ್ಿ ಜ್ಞಾನೇಶ ಕಾರ್ಯಕ್ರಮ ನಿರ್ವಹಿಸಿದರು. ಸೃಜನ ವಂದಿಸಿದಳು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries