HEALTH TIPS

No title

                    ಮಹಾಜನ ವರದಿಗೆ 50 ವರ್ಷ ಭತರ್ಿ
         ಏಕೀಕರಣ ಬಿಡಿ, ಗಡಿನಾಡ ಕನ್ನಡಿಗರು ಹೇಗಿದ್ದಾರೆ ಎಂಬ ಗೋಜಿಗೂ ಯಾರೂ ಹೋಗಿಲ್ಲ
        ಕಾಸರಗೋಡು: ಅಚ್ಚ ಗನ್ನಡದ ನೆಲ, ಹಲವು ಕನ್ನಡದ ರಾಜವಂಶಜರು ಆಳಿದ್ದ ಕಾಸರಗೋಡು ಜಿಲ್ಲೆಯ ಉತ್ತರದ ಚಂದ್ರಗಿರಿ ತೀರದವರೆಗೆ ಇರುವ ಭೂ ಪ್ರದೇಶ ಪ್ರಾಂತ್ಯ ವಿಂಗಡನೆ ವೇಳೆ ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋಯಿತು. ಅಂದು ಮಾಡಿದ ರಾಜಕೀಯ ಕುಟಿಲ ಪ್ರಮಾದದ ಫಲವನ್ನು ಇಂದು ಕಾಸರಗೋಡಿನ ಕನ್ನಡಿಗರು ಅನುಭವಿಸುವಂತಾಗಿದೆ. ಕನ್ನಡಿಗರು ಮಲಯಾಳಿಗರ ಅಧೀನರಾಗಿದ್ದಾರೆ. ಪ್ರಸ್ತುತ ಮಲಯಾಳಿಕರಣವೆಂಬ ಭೀತಿ, ದುಸ್ಥಿತಿಯ ಛಾಯೆ ಕಾಸರಗೋಡು ಕನ್ನಡಿಗರ ಮೇಲಿದೆ. ಪ್ರಾಂತ್ಯ ವಿಂಗಡನೆ ವೇಳೆ ಅಚ್ಚ ಕನ್ನಡದ ನೆಲ ಕೇರಳ ಪಾಲಗಿದೆ ಎಂಬುದನ್ನು ಅರಿತ ಇಲ್ಲಿನ ಮುಗ್ಧ ಕನ್ನಡಿಗರು ಅಂದು ಪ್ರಬಲ ಹೋರಾಟಕ್ಕೆ ಮುಂದಾದರು. ಮೂರು ದಶಕಗಳ ಕಾಲ ಹೋರಾಟದ ಫಲ ಇನ್ನೂ ಪ್ರಾಪ್ತಿಯಾಗಿಲ್ಲ. ಕನ್ನಡದ ಭೂಭಾಗ ಕನರ್ಾಟಕಕ್ಕೆ ಸೇರಬೇಕೆಂಬ ಮಹಾಜನ ವರದಿ ಇನ್ನೂ ಮಂಡನೆಯಾಗಿಲ್ಲ. 50 ವರ್ಷ ಹಳೆಯ ಮಹಾಜನ ವರದಿ ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡದ ಆಸ್ಮಿತೆಯ ಪ್ರಶ್ನೆಯಾಗಿಯೇ ಉಳಿದಿದೆ.
    ಕನ್ನಡದ ಪ್ರಥಮ ರಾಷ್ಟ್ರಕವಿ ಹುಟ್ಟಿ ಬೆಳೆದು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಸ್ಥಳವಾದ ಮಂಜೇಶ್ವರ ಕೇರಳದ ಭಾಗವಾಗಿದೆ. ಕನ್ನಡ ಏಕೀಕರಣ ಕಹಳೆ ಮೊಳಗಿಸಿದ ನಾಡೋಜ ಕಯ್ಯಾರ ಕಿಞಣ್ಣ ರೈಯವರ ಕಾಸರಗೋಡು ಇನ್ನೂ ಕೇರಳದಲ್ಲಿದೆ. ಅಂದು ಈ ಪ್ರದೇಶದ ರಾಜಕೀಯ ಶಕ್ತಿಗಳು ಒಂದಾಗಿ ದನಿಗೂಡಿಸಿ ಕನ್ನಡ ಏಕೀಕರಣ ಸಮಿತಿಯು ರಚನೆಗೊಂಡು ವಿಧಾನಸಭಾ ಚುನಾವಣೆಯಲ್ಲಿಯೂ ಏಕೀಕರಣದ ನಾಯಕರೇ ಪ್ರತಿರೋಧವಿಲ್ಲದೆ ಗೆಲ್ಲುವಂತಾಗಿತ್ತು. ಇದರ ತರುವಾಯ ಮಹಾಜನ ಆಯೋಗ ರಚನೆಯಾಯಿತು. ಕನ್ನಡ ಪ್ರದೇಶದಿಂದ ಆರಿಸಿ ಹೋದ ಸಂಸದರು ಕನ್ನಡಿಗರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿ, ಕನರ್ಾಟಕ ಸರಕಾರದಲ್ಲಿದ್ದ ಹಲವು ಶಾಸಕರು ಸಹಿತ ಮುಖ್ಯಮಂತ್ರಿಗಳ ದೂರದೃಷ್ಠಿಯ ಪರಿಣಾಮ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಮೂಲಕ ಅ.25,1966 ರಲ್ಲಿ ಮಹಾಜನ ಏಕವ್ಯಕ್ತಿ ಆಯೋಗ ರಚನೆಯಾಯಿತು. ನಂತರ ಮಹಾಜನ ಆಯೋಗದ ಮೂಲಕ ಮಹಾರಾಷ್ಟ್ರ-ಮತ್ತು ಅಂದಿನ ಏಕೀಕೃತ ಮೈಸೂರು, ಕೇರಳ ಗಡಿ ಪ್ರದೇಶವಾದ ಕಾಸರಗೋಡಿನ ಕನ್ನಡ ಪ್ರದೇಶವನ್ನು ಕನರ್ಾಟಕ ರಾಜ್ಯಕ್ಕೆ ಸೇರಿಸುವ ಪ್ರಥಮ ಹಂತದ ಪ್ರಯತ್ನ ನಡೆಯಿತು. ಆಯೋಗವು ಮೂರು ರಾಜ್ಯಗಳ ಮಹಾರಾಷ್ಟ್ರ, ಕನರ್ಾಟಕ, ಕೇರಳದ ವಿವಿಧ ಶಾಸಕರು, ಸಂಸದರು, ಜನಸಾಮಾನ್ಯರು, ವಿವಿಧ ಸಮಿತಿಗಳು, ಸಾರ್ವಜನಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿತು. ಆದರೆ ಕಾಸರಗೋಡು ಕನ್ನಡಿಗರ ವಿಚಾರದಲ್ಲಿ ಅಂದು ಕೇರಳವು ಸುಸ್ಥಿರ ರಾಜ್ಯ ಸರಕಾರವಿಲ್ಲದ್ದರಿಂದ ನಮ್ಮ ಅಭಿಪ್ರಾಯವನ್ನು ನಂತರ ಹಂಚಿಕೊಳ್ಳಲಾಗುವುದು ಎಂದಿತ್ತು. ಕಾಸರಗೋಡು ಕನ್ನಡದ ವಿಚಾರದಲ್ಲಿ ಆಯೋಗಕ್ಕೆ ಒಟ್ಟು 223 ನಿವೇದನ ಪತ್ರಗಳು ನೀಡಲ್ಪಿಟ್ಟಿದ್ದವು. ಇವುಗಳಲ್ಲಿ 44 ನಿವೇದನೆಗಳು ಮಲಯಾಳಿ ಭಾಷಿಗ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಲಭಿಸಿದ್ದು, ಮಲಯಾಳಿಗರು ಕಾಸರಗೋಡಿನ ಭೂಭಾಗ ಕನರ್ಾಟಕಕ್ಕೆ ಸೇರಬೇಕೆಂಬ ಬೇಡಿಕೆಯನ್ನು ಮನ್ನಿಸಿದ್ದರು. ಕೇವಲ ಐದು ಹೇಳಿಕೆಗಳು ಕಾಸರಗೋಡು ಕನರ್ಾಟಕಕ್ಕೆ ಸೇರುವುದರ ವಿರುದ್ಧವಾಗಿತ್ತು. ಆಯೋಗವು ಕಾಸರಗೋಡು ಮತ್ತು ಮಂಗಳೂರಿನ 186 ಮಂದಿ ಸಾಹಿತಿ, ರಾಜಕಾರಣಿಗಳು, ಹೋರಾಟಗಾರರ ಅಭಿಮತವನ್ನು ಸಂದರ್ಶನದ ಮೂಲಕ ಸಂಗ್ರಹಿಸಿತು. ಕನರ್ಾಟಕ ಸರಕಾರವನ್ನು ಪ್ರತಿನಿಧಿಸಿದ ನ್ಯಾಯವಾದಿ ಕೆ.ಆರ್.ಕಾರಂತರು, ಕನರ್ಾಟಕ ಪ್ರಾಂತ್ಯ ಏಕೀಕರಣದ ಸಮಿತಿ ಪ್ರತಿನಿಧಿಯಾಗಿ ಹೆಚ್.ಜಿ.ಹಂದೆ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆಂಬ ಅಚಲ ನಿಲುವನ್ನು ತಾಳಿದ್ದರು. 1967 ಆಗಸ್ಟ್ 25 ರಂದು ಆಯೋಗದ ಕೂಲಂಕಷ ವರದಿಯನ್ನು ಭಾರತ ಸರಕಾರದ ಕೇಂದ್ರ ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು. ಆಯೋಗದ ವರದಿ ಏಕಪಕ್ಷೀಯವಾಗಿದೆ ಎಂಬುದನ್ನು ಅಂದಿನ ಕೇರಳ ಮುಖ್ಯಮಂತ್ರಿ ಹೇಳಿದ್ದರು ಮಾತ್ರವಲ್ಲದೆ ಕೆಲ ಮಾಧ್ಯಮಗಳು ಆಯೋಗದ ಏಕಪಕ್ಷೀಯ ನಡೆಯನ್ನು ಪ್ರಶ್ನಿಸಿದ್ದವು. ಆದರೆ ಇದಕ್ಕೆ ಹೆಚ್ಚಿನ ಮಾನ್ಯತೆ ದೊರೆಯಲಿಲ್ಲ.
    ಮಹಾರಾಷ್ಟ್ರ ಮತ್ತು ಕಾಸರಗೋಡಿನ ಕನ್ನಡ ಭಾಷಿಗರ ಭೂ ಪ್ರದೇಶವನ್ನು ಸಂದಶರ್ಿಸಿ, ಆದ್ಯತೆಗಳು ಸಹಿತ ಜನಸಾಮಾನ್ಯರ ನಿಲುವನ್ನು ಸಂಗ್ರಹಿಸಿ ಪಟ್ಟಿ ಮಾಡಿದ್ದ ಮಹಾಜನ ಆಯೋಗದ ವರದಿಯಲ್ಲಿ ಕಾಸರಗೋಡಿನ 71 ಗ್ರಾಮಗಳಲ್ಲಿ ಕನ್ನಡ ಭಾಷಿಗರೇ ಇದ್ದು ಕನರ್ಾಟಕಕ್ಕೆ ಸೇರಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಪಯಸ್ವಿನಿ ಮತ್ತು ಚಂದ್ರಗಿರಿ ನದಿಯ ಉತ್ತರದಲ್ಲಿರುವ ಗ್ರಾಮಗಳನ್ನು ಕೇರಳ ರಾಜ್ಯದಿಂದ ಬೇರ್ಪಡಿಸಿ ಕನರ್ಾಟಕಕ್ಕೆ ಒಳಪಡಿಸಬೇಕೆಂಬುದನ್ನು ಆಯೋಗದ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಆಯೋಗದ ವರದಿಯು ಐದು ದಶಕಗಳು ಕಳೆದರೂ ಸಂಸತ್ತಿನಲ್ಲಿ ಮಂಡನೆಯಾಗಿಲ್ಲ. ಮೊದಮೊದಲಿಗೆ ಕನ್ನಡಿಗ ಸಂಸದರೇ ಆಯ್ಕೆಯಾಗುತ್ತಿದ್ದ ಕಾಲಘಟ್ಟ ಬದಲಾಗಿ ದಕ್ಷಿಣ ಕಾಸರಗೋಡು ಪ್ರದೇಶದ ಮಲಯಾಳಿ ಮಂದಿ ರಾಜಕೀಯ ಪ್ರಭುತ್ವವನ್ನು ಸ್ಥಾಪಿಸಿ, ಮಹಾಜನ ಆಯೋಗದ ಬಗ್ಗೆ ಚಕಾರವೆತ್ತಿಲ್ಲ. 1985 ರಲ್ಲಿ ಕನರ್ಾಟಕ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗ್ಡೆ ಅಂದಿನ ಪ್ರಧಾನಿಗೆ ಬರೆದ ಪತ್ರದಲ್ಲಿ ಮಹಾಜನ ವರದಿ ಮಂಡನೆ ಸಹಿತ ಕನರ್ಾಟಕದ ರಾಜ್ಯ ಜನತೆಯ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ವಿನಂತಿಸುತ್ತಾರೆ. ಮಹಾಜನ ವರದಿಯ ಜ್ಯಾರಿ ಅಗತ್ಯತೆಯ ಬಗ್ಗೆ ವಿಶೇಷ ಶಾಸಕಾಂಗ ಸಭೆಯನ್ನು ಡಿ.20, 1967 ಕರೆದು ಈ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ. ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂದಿಯವರಿಗೆ ಮೂರು ಪತ್ರಗಳನ್ನು ಬರೆದಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಮಹಾಜನ ಆಯೋಗದ ವರದಿಯಲ್ಲಿನ ಅಂಶಗಳನ್ನು ಮಂಡನೆಯಾಗಬೇಕು ಮಾತ್ರವಲ್ಲ ಜ್ಯಾರಿಗೆ ಬರಬೇಕಿದೆ ಎಂದು ವಿನಂತಿಸುತ್ತಾರೆ. ಆದರೆ ಬರೋಬ್ಬರಿ ಐದು ದಶಕ ಕಳೆದರೂ ಮಹಾಜನ ವರದಿಯ ಬಗ್ಗೆ ಯಾವ ಜನ ನಾಯಕನೂ ಚಕಾರವೆತ್ತಿಲ್ಲ.
    ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್ ನಂಬೂದಿರಿಪ್ಪಾಡ್ ಬರೆದ ರಾಷ್ಟ್ರೀಯ ಪ್ರಶ್ನೆಗಳು ಎಂಬ ಪುಸ್ತಕದಲ್ಲಿ ಕೇರಳದ ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಪೂರ್ವಕ್ಕೆ ಪಶ್ಚಿಮ ಘಟ್ಟ ಶ್ರೇಣಿಯಿದೆ. ದಕ್ಷಿಣ ತುದಿಯಲ್ಲಿರುವ ಪ್ರದೇಶವು ತಮಿಳುನಾಡಿನ ಭಾಗವಾಗಿದ್ದರೆ ಉತ್ತರದ ತುಳು, ಕೊಡವ ಭಾಷೆಯನ್ನು ಮಾತನಾಡುವ ಭೂಭಾಗವನ್ನು ಸಾಮಾನ್ಯವಾಗಿ ಕನರ್ಾಟಕದ ಭೂ ಪ್ರದೇಶವೆಂದು ನಂಬುತ್ತೇವೆ. ತುಳು, ಕನ್ನಡ ಭಾಷಿಗರಿರುವ ದ.ಕನ್ನಡದ ಈ ಭೂಭಾಗ ಕನರ್ಾಟಕಕ್ಕೆ ಸೇರಬೇಕು ಎಂಬುದನ್ನು ಅವರು ಸ್ಪಷ್ಟಪಡಿಸುತ್ತಾರೆ. ಇದಕ್ಕೂ ಮೊದಲು 24.11.1955 ರಲ್ಲಿ ಮದ್ರಾಸು ಸರಕಾರವು ಚಂದ್ರಗಿರಿ ನದಿ ಉತ್ತರದಲ್ಲಿರುವ ಭೂಭಾಗವು ಕನರ್ಾಟಕ ರಾಜ್ಯದ ಭೂಭಾಗ ಎಂಬ ಗೊತ್ತುವಳಿಯನ್ನು ಮಂಡಿಸಿದೆ.

    ಮಹಾಜನ ವರದಿ ಪ್ರಸ್ತುತ
ನಿರಂತರ ಮಲಯಾಳೀಕರಣದ ಕರಿಛಾಯೆ ಗಡಿನಾಡಿನಲ್ಲಿ ಆವರಿಸುತ್ತಿದೆ. ಸಾಂವಿಧಾನಿಕ ಭಾಷಾ ಅಲ್ಪ ಸಂಖ್ಯಾತರ ಹಕ್ಕು ರಕ್ಷಣೆಗೆ ಬದ್ಧವಿರದ ಕೇರಳ ರಾಜ್ಯ ಸರಕಾರಗಳು ಕನ್ನಡ ವಿರೋಧಿ ನೀತಿಯನ್ನೇ ಅವಲಂಬಿಸುತ್ತಿವೆ. ಕನ್ನಡಿಗರ ಭಾಷಾ ಹಕ್ಕು ರಕ್ಷಣೆಯ ಮಧ್ಯೆ ಮಹಾಜನ ವರದಿಯ ಅಂಶಗಳು ಪ್ರಸ್ತುತವೆನಿಸುತ್ತವೆ. ವರದಿ ಅಂಶಗಳು ಇಂದಿಗೂ ಪ್ರಸ್ತುತ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡದ ನೆಲವೂ ಮಲಯಾಳಮಯವಾಗುವುದನ್ನು ತಪ್ಪಿಸಲು ವರದಿ ಮಂಡನೆ ಸಮಂಜಸ. ದಬ್ಬಾಳಿಕೆ ತಡೆಯಲು ಕನ್ನಡ ಸಂಸ್ಕೃತಿ ಆಚಾರ ವಿಚಾರಗಳನ್ನು ಎತ್ತಿ ಹಿಡಿಯಲು ವರದಿ ಮಂಡನೆಯಾಗಬೇಕು. ಈ ಮಧ್ಯೆ ಕಡ್ಡಾಯ ಮಲಯಾಳವೆಂಬ ನೀತಿಯಿಂದ ಕನ್ನಡ ವಿದ್ಯಾಥರ್ಿಗಳ ಶಿಕ್ಷಣದ ಹಕ್ಕನ್ನು ಕಸಿಯುವ ಕುಟಿಲ ನೀತಿಯನ್ನು ಸರಕಾರ ಅನುಸರಿಸುತ್ತಿದೆ. ಮಲಯಾಳಂ ಕಡ್ಡಾಯ ನೀತಿಯು ಕನ್ನಡಿಗರ ಆಸ್ಮಿತೆಗೆ ಧಕ್ಕೆ ಒಡ್ಡುತ್ತಿವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳೀ ಶಿಕ್ಷಕರ ನೇಮಕ, ಕನ್ನಡ ಶಾಲೆಗಳನ್ನು ವಿದ್ಯಾಥರ್ಿಗಳಿಲ್ಲ ಎಂಬ ಕಾರಣಕ್ಕೆ ಮುಚ್ಚುವ ಪರಿಪಾಠದ ಮಧ್ಯೆ, ಕನ್ನಡ ಹೋರಾಟಗಳಿಗೆ ಸೂಕ್ತ ಸ್ಪಂದನೆಗಳು ಕೇರಳ ಸರಕಾರದಿಂದ ಕಮ್ಮಿಯಾಗತೊಡಗಿವೆ. ಈ ಮಧ್ಯೆ ಪ್ರದೇಶಕ್ಕೆ ಭೇಟಿ ನೀಡುವ ಹಲವು ರಾಜಕೀಯ ನಾಯಕರು ಇಲ್ಲಿನ ಕನ್ನಡಿಗರ ಆಶೋತ್ತರಗಳನ್ನು ಅರಿಯದೆ ತೆರಳುತ್ತಿರುವುದು ಒಂದು ವಿಪಯರ್ಾಸ. ಕನ್ನಡಿಗರ ಭೂ ಪ್ರದೇಶವೆಂದು ಗೊತ್ತಿದ್ದರೂ ಕನ್ನಡಿಗರ ಸಮಸ್ಯೆ ದೊಡ್ಡ ಸಮಸ್ಯೆ ಅಲ್ಲವೆಂಬಂತೆ ವತರ್ಿಸುತ್ತಾರೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕನರ್ಾಟಕವನ್ನೇ ಅವಲಂಬಿತವಾಗಿರುವ ಕಾಸರಗೋಡಿನ ಜನಮಾನಸ ಮತ್ತು ಭೂಭಾಗ ಕನರ್ಾಟಕಕ್ಕೆ ಸೇರಬೇಕು ಎಂಬುದು ಹೆಚ್ಚು ಸೂಕ್ತ. ಮಹಾಜನ ವರದಿ ಮೇಲೆ ಶೇಖರಗೊಂಡ ಧೂಳನ್ನು ತೆಗೆಯುವ ವೀರ ಕನ್ನಡಿಗ ಬೇಕಾಗಿದ್ದಾನೆ ಅಷ್ಟೆ!


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries