HEALTH TIPS

No title

  ಯಕ್ಷಗಾನ ನವಾಹ ಸಂಪನ್ನ- ಸಮ್ಮಾನ 
     ಮಂಜೇಶ್ವರ: ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಹಮ್ಮಿಕೊಂಳ್ಳಲಾಗಿದ್ದ  ಎಂಟನೇ ವರ್ಷದ ಯಕ್ಷಗಾನ ನವಾಹವು ಸಮಾರೋಪದೊಂದಿಗೆ ಸಂಪನ್ನಗೊಂಡಿತು.
      ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರವಿ ಶಂಕರ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಖ್ಯಾತ ಮದ್ದಳೆಗಾರ, ಹಿಮ್ಮೇಳ ತರಗತಿ ಆರಂಭಿಸಿ 50 ವರ್ಷಗಳನ್ನು ಪೂರೈಸಿ ಸಾವಿರಾರು ಶಿಷ್ಯಂದಿರಿಗೆ ತಮ್ಮ ಕಲಾಸಿರಿಯನ್ನು ಧಾರೆ ಎರೆದ ಯಕ್ಷಗಾನದ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಾನದ ವತಿಯಿಂದ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಗುರುಗಳು ಕೋಳ್ಯೂರಿನಲ್ಲಿ ತಾನು ನಡೆಸಿದ ತರಗತಿಗಳು ಮತ್ತು ಶಿಷ್ಯಂದಿರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಖ್ಯಾತ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅಭಿನಂದನಾ ಭಾಷಣಗೈದರು.
    ಇದೇ ಸಂದರ್ಭದಲ್ಲಿ ಶಂಕರ ಭಟ್ ಬಡಾಜೆ ರಚಿಸಿದ ಶಂಕರನಾರಾಯಣ ದೇವರ ಕೀರ್ತನ ಮಂಜರಿ ಭಕ್ತಿ ಗೀತಾ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ವಿಶೇಷ ಅತಿಥಿಗಳಾದ ಯೋಗೀಶ್ ರಾವ್ ಚಿಗುರುಪಾದೆ, ರಾಜಾ ಬೆಳ್ಚಪ್ಪಾಡ ಉಪಸ್ಥಿತರಿದ್ದು ಶುಭಹಾರೈಸಿದರು. ಸಮಾರೋಪದ ಅಧ್ಯಕ್ಷತೆವಹಿಸಿದ್ದ ಕೆ.ಕೃಷ್ಣ ಉಪಾಧ್ಯಾಯ ಅವರು ಮಾತನಾಡಿ, ಧಾಮರ್ಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಬರುವಂತೆ ಮಾಡುವುದು ರಕ್ಷಕರ ಜವಾಬ್ದಾರಿ. ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳನ್ನು ಪ್ರೇರೇಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
   ವೇದಮೂತರ್ಿ ರಾಜೇಶ್ ತಾಳಿತ್ತಾಯ ಹೊಸಮನೆ, ಪ್ರಕಾಶ್ ಪೊಯ್ಯತ್ತಬೈಲ್, ಸೋಮನಾಥ ಕಾರಂತ ಉಪಸ್ಥಿತರಿದ್ದರು. ಗುರುರಾಜ್ ಸ್ವಾಗತಿಸಿ, ಅವಿನಾಶ್ ಹೊಳ್ಳ ವಂದಿಸಿದರು. ದೀಕ್ಯಿತಾ ಕೋಳ್ಯೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ರಾವಣೋದ್ಭವ-ಕ್ಷತ್ರಿಯ ಸಂಹಾರ ಎಂಬ ಯಕ್ಷಗಾನ ಬಯಲಾಟ ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries