HEALTH TIPS

No title

               ಅಡಿಕೆ ಹೆಕ್ಕುವುದು ಇನ್ನು ಸ್ಮಾಟರ್್- ಸ್ಮಾಟರ್್ಪಿಕ್ ಅನ್ವೇಷಣೆ
     ಉಪ್ಪಳ: ಕೃಷಿ ಕ್ಷೇತ್ರದ ಲಾಭ-ನಷ್ಟಗಳ ಬಗ್ಗೆ ಚಚರ್ೆಗಳು-ಚಿಂತನೆಗಳು ನಡೆಯುತ್ತಿರುವಾಗ ಹೆಚ್ಚು ಕೇಳಿ ಬರುವ ಅಭಿಪ್ರಾಯ ಕೂಲಿಯಾಳುಗಳ ಕೊರತೆ. ಕೃಷಿ ಕ್ಷೇತ್ರದಿಂದ ಹೊಸ ತಲೆಮಾರು ದೂರ ಸರಿಯುತ್ತಿರುವುದು ನಿಜವಾದರೂ ಕೆಲವರು ಅಲ್ಲಲ್ಲಿ ಹೊಸ ಪ್ರಯೋಗ, ಪರೀಕ್ಷೆಗಳ ಮೂಲಕ ತಂತ್ರಜ್ಞಾನಗಳನ್ನು ಬಳಸಿ ಕೃಷಿ ಮುಮದುವರಿಸುತ್ತಿರುವುದೂ ಗಮನಾರ್ಹ. ಪ್ರಸ್ತುತ ಯಂತ್ರಗಳಿಂದಲೇ ಅವಲಂಬಿತವಾಗಿರುವ ಕೃಷಿಕರಿಗೆ ಬಾಯಾರು ಪೆರ್ವಡಿ ಬಳ್ಳೂರು ನಿವಾಸಿ ಕೃಷಿಕ ಪ್ರಕಾಶ ಭಟ್ ಅವರು  ಇದೀಗ ಅಡಿಕೆ ಹೆಕ್ಕುವ ಸ್ಮಾಟರ್್ಪಿಕ್ ಎಂಬ ನೂತನ ಉಪಕರಣವೊಂದನ್ನು ಕಂಡು ಹಿಡಿದು ಭರವಸೆ ಮೂಡಿಸಿದ್ದಾರೆ.
    ಅಡಿಕೆ ತೋಟದಿಂದ ನಿತ್ಯ ಅಡಿಕೆ ಹೆಕ್ಕಲು ಆಳುಗಳ ಕೊರತೆಯನ್ನು ನಿವಾರಿಸಲು ಈ ಯಂತ್ರ ಸಹಕಾರಿಯಾಗಲಿದೆ.ಇಳಿ ಹರೆಯದವರಿಗೆ, ಸೊಂಟ, ಕೈ ಕಾಲು ನೋವಿನವರಿಗೆ ನಿಂತ ನಿಲುವಿನಲ್ಲೇ ಊರುಗೋಲಿನಂತೆ ತೋಟದಲ್ಲಿ ಬಿದ್ದಿರುವ ಅಡಿಕೆಯನ್ನು ಸುಲಭವಾಗಿ ಸ್ಮಾಟರ್್ ಪಿಕ್ ಮೂಲಕ ಹೆಕ್ಕಬಹುದಾದ ಈ ಉಪಕರಣ ಇದೀಗ ಗಮನ ಸೆಳೆಯುತ್ತಿದೆ.
    ಸರಳ ಉಪಕರಣ:
  6 ಅಡಿ ವ್ಯಾಸದ ಪಿ.ವಿ.ಸಿ.6 ಇಂಚು ಉದ್ದದ ಪೈಪಿನ ತಳ ಭಾಗವನ್ನು ಡೈ ಮೂಲಕ 5 ಇಂಚು ಅಗಲ 5 ಇಂಚು ಉದ್ದದ ಚೌಕಾಕರದ ಪಾತ್ರೆಯಾಗಿ ವಿನ್ಯಾಸ ಮಾಡಿರುವ ಸಾಧನಕ್ಕೆ ಮರದ ಹಿಡಿಯನ್ನು ಜೋಡಿಸಲಾಗಿದೆ.ಪೈಪ್ನ ತಳಭಾಗಕ್ಕೆ ಅಲ್ಯೂಮಿಯಂ ಪಟ್ಟಿಯ ಮೂಲಕ 5 ಸ್ಪ್ರಿಂಗ್ಗಳನ್ನು ಆಳವಡಿಸಲಾಗಿದೆ. ತಳಭಾಗದ ಸ್ಪ್ರಿಂಗ್ನ ಎಡೆಯ ಮೂಲಕ ಸುಮಾರು ಹತ್ತಿಪ್ಪತ್ತು ಅಡಿಕೆಗಳು ಈ ಸ್ಮಾಟರ್್ ಪಿಕ್ನೊಳಗೆ ತುಂಬುವಂತಿದೆ.
   ತೋಟದ ಹುಲ್ಲಿನೆಡೆಯಲ್ಲಿ ಯಾವುದಾದರೂ ವಿಷ ಜಂತುಗಳಿದ್ದಲ್ಲಿ ಈ ಸ್ಪ್ರಿಂಗಿನ ಶಬ್ಧದಿಂದಲೇ ಕಾಲ್ಕೀಳುವುದು ಎಂಬುದು ಪ್ರಕಾಶ್ ಭಟ್ ಅವರದು. ತೋಟದ ಅಡಿಕೆಯ ಜೊತೆಗೆ ಮನೆಯ ಅಂಗಳದಲ್ಲಿ ಹರಡಿರುವ ಅಡಿಕೆಯನ್ನೂ ಈ ಸರಳ ಯಂತ್ರದ ಮೂಲಕ ಗೋಣಿ ಚೀಲಗಳಿಗೆ ರವಾನಿಸಬಹುದಾಗಿದೆ. ತೋಟದ ಕೆರೆಗಳಲ್ಲಿ ಅಥವಾ ಹೆಕ್ಕಲು ಕಷ್ಟವಾಗುವ ಇತರ ಅಪಾಯಕಾರಿ ಪರಿಸರಗಳಿಂದಲೂ ಅಡಿಕೆಗಳನ್ನು ಹೆಕ್ಕಲು ಈ ಉಪಕರಣ ಸಹಾಯಿಯಾಗಿದೆ.
    ಕೃಷಿ ಕುಟುಂಬದಲ್ಲಿ ಬೆಳೆದ ಪ್ರಕಾಶ್ ಭಟ್ ಅವರು ಮಂಗಳೂರು ಗೋಕರ್ಣನಾಥ ಕಾಲೇಜಿನಲ್ಲಿ ಐ.ಟಿ.ಐ.ತಾಂತ್ರಿಕ ಶಿಕ್ಷಣ ಪಡೆದು ಸರಕಾರಿ ಉದ್ಯೋಗವನ್ನು ನೆಚ್ಚಿಕೊಳ್ಳದೆ ಪರಂಪರಾಗತವಾಗಿ ಸಾಂಪ್ರದಾಯಿಕ ಕೃಷಿಯತ್ತ ಒಲವು ತೋರಿದ್ದಾರೆ. ತಮ್ಮ ಸ್ವಂತ ಜಮೀನಿನಲ್ಲಿ ಕಂಗು,ತೆಂಗು,ರಬ್ಬರ್,ಕರಿಮೆಣಸು,ಬಾಳೆ ಮೊದಲಾದ ಬೆಳೆಸುವುದರೊಂದಿಗೆ ಬಾಯಾರಿನಲ್ಲಿ ರಾಮಾಂಜನೇಯ ಆಗ್ರೋ ಸವರ್ೀಸ್ ಕೇಂದ್ರದ ಮೂಲಕ ಕೃಷಿ ಯಂತ್ರೋಪಕರಣ ದುರಸ್ತಿಯನ್ನೂ ಸಹ ನಡೆಸುತ್ತಿದ್ದಾರೆ. ಈ ಮಧ್ಯೆ ಸ್ಮಾಟರ್್ಪಿಕ್ ನಿಮರ್ಿಸುವ ಯೋಚನೆ ಹೊಳೆದು ಇದರಲ್ಲಿ ಯಶಸ್ವಿಯಾಗಿರುದು ಅವರಿಗೆ ತೃಪ್ತಿ ನೀಡಿದೆ. ದೀರ್ಘಕಾಲ ಬಾಳ್ವಿಕೆಯ ಕೇವಲ 625 ಗ್ರಾಂ ತೂಕದ ಈ ಉಪಕರಣಕ್ಕೆ 900 ರೂ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಇದರೊಂದಿಗೆ ಹೊಂಡದಿಂದ ಅಡಿಕೆ ಹೆಕ್ಕುವ ಯಂತ್ರದ ರಚನೆ ಪ್ರಗತಿಯಲ್ಲಿದೆ.
  ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿರುವ ಈ ಸ್ಮಾಟರ್್ಪಿಕ್ಗೆ ಈಗಾಗಲೇ ಭಾರೀ ಬೇಡಿಕೆ ಕಂಡು ಬಂದಿದೆ.ಪುತ್ತೂರು ಜ್ಯೋತಿಶ್ರೀ ಆಗ್ರೋ ಟ್ರೇಡಸರ್್ ಈ ಉಪಕರಣದ ಬಿಡುಗಡೆಯ ಬಳಿಕ ವಿತರಣೆಗೆ ಮುಂದಾಗಿದ್ದಾರೆ.
    ಹೆಚ್ಚಿನ ವಿವರಗಳಿಗೆ 9495765725 ಮೊಬೈಲ್ ಮೂಲಕ ಸಂಪಕರ್ಿಸಬಹುದು.
     ಏನಂತಾರೆ:
    ಕೃಷಿ ಕ್ಷೇತ್ರದ ಸುಲಭ ನಿರ್ವಹಣೆಗಾಗಿ ಸರಳ ಯಂತ್ರಗಳನ್ನು ಶೋಧಿಸುವ ನಿಟ್ಟಿನಲ್ಲಿ ಕಳೆದ ಒಮದು ವರ್ಷದಿಂದ ಸ್ಮಾಟರ್್ಫಿಕ್ ಯಂತ್ರ ಅಭಿವೃದ್ದಿಪಡಿಸಿರುವೆ. ಸ್ಪ್ರಿಂಗ್ ಮೂಲಕ ಪ್ರವತರ್ಿಸುವ ಈ ಉಪಕರಣ ಹೆಚ್ಚು ದುಬಾರಿಯೂ ಅಲ್ಲ.ಜೊತೆಗೆ ಸುಲಭವಾಗಿ ಬಲಸಲೂ ಸಾಧ್ಯವಿದೆ. ಹತ್ತು ನಿಮಿಷಗಳ ಅಭ್ಯಾಸದಿಂದ ಯಾರಿಗೂ ಬಳಸಬಹುದಾಗಿದ್ದು, ನಿರ್ವಹಣೆ ಸುಲಭ.
   ಸರಳವಾದ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಯುವ ಸಮೂಹ ಆಸಕ್ತಿ ತೋರಿಸಬೇಕು. ಇತರ ಕ್ಷೇತ್ರಗಳಲ್ಲಿ ನಾವು ಹೊಂದುವ ಆಸಕ್ತಿಯಂತೆಯೇ ಕೃಷಿಯಲ್ಲೂ ಮುನ್ನಡೆದರೆ ತೃಪ್ತಿ ಹಾಗೂ ಅಧಿಕ ಲಾಭದಾಯಕವಾಗುವುದರಲ್ಲಿ ಸಂಶಯವಿಲ್ಲ.
                       ಪ್ರಕಾಶ ಭಟ್ ಬಳ್ಳೂರು.
                  ಸ್ಮಾಟರ್್ಫಿಕ್ ಸಂಶೋಧಕ 




  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries