HEALTH TIPS

ನೋಟು ನಿಷೇಧದಿಂದ ಆಥರ್ಿಕತೆಯಲ್ಲಿ ಅಸ್ಥಿರತೆ: ಸಂಸದೀಯ ಸಮಿತಿ ಮುಂದೆ ಆರ್ ಬಿಐ ಗವರ್ನರ್ ಹೇಳಿಕೆ

             
       ನವದೆಹಲಿ: ಕೇಂದ್ರ ಸರಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆಥರ್ಿಕತೆ ಅಸ್ಥಿರವಾಗಿದೆ ಎಂದು ರಿಸವರ್್ ಬ್ಯಾಂಕ್ ಗವರ್ನರ್ ಊಜರ್ಿತ್ ಪಟೇಲ್ ಹೇಳಿದ್ದಾರೆ.
ನೋಟು ನಿಷೇಧ, ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿಗಳು ಸೇರಿ ಅನೇಕ ವಿಚಾರದ ಬಗ್ಗೆ ವಿವರಿಸಲು ರಿಸವರ್್ ಬ್ಯಾಂಕ್ ಗವರ್ನರ್ ಊಜರ್ಿತ್ ಪಟೇಲ್ ಮಂಗಳವಾರ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದಾರೆ. ಹೀಗೆ ಹಾಜರಿಗೆ ಮುನ್ನ ಕೆಲವು ವಿವಾದಾತ್ಮಕ ವಿಷಯದ ಕುರುತು ಲಿಖಿತ ಉತ್ತರ ನೀಡುವುದಕ್ಕಾಗಿ ತಾನು ಸಮಿತಿಗೆ ಬದ್ದನಾಗಿದ್ದೇವೆ  ಎಂದು ಅವರು ಹೇಳಿದ್ದರು.
    ಕಳೆದ ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಈಗ ಇಳಿಕೆಯಾಗುತ್ತಿದೆ, ಪರಿಣಾಮ ಆಥರ್ಿಕತೆ ವಧರ್ಿಸುತ್ತಿದೆ. ಹೀಗಾಇ ಆಥರ್ಿಕ ಬೆಳವಣಿಗೆ ಕುರಿತು "ಆಶಾವಾದ" ತಾಳಬಹುದು ಎಂದು ಆವರು ಅಭಿಪ್ರಾಯಪಟ್ಟರು.
   ಸಾಲದ ಬೆಳವಣಿಗೆ ದರ ಶೇ.15ರಷ್ಟು ಏರಿಕೆಯಾಗಿತ್ತು.ಹಣದುಬ್ಬರವು ಶೇಕಡ 4 ಕ್ಕೆ ಇಳಿದಿದೆ ಮತ್ತು ಜಿಡಿಪಿ ಅನುಪಾತಕ್ಕೆ ಹೋಲಿಸಿದಾಗ ಹಣಕಾಸು ವಹಿವಾಟು ಹೆಚ್ಚಳವಾಗಿದೆ ಎಂದು ಪಟೇಲ್ ವಿವರಿಸಿದ್ದಾರೆ. ಆದರೆ 2016ರಲ್ಲಿ ಕೇಂದ್ರ ಸಕರ್ಾರ ಜಾರಿಗೊಳಿಸಿದ ಅಪನಗದೀಕರಣ ಅಥವಾ ನೋಟು ನಿಷೇಧವು ಆಥರ್ಿಕತೆಯನ್ನು ಅಸ್ಥಿರವಾಗಿಸಿದೆ ಎಂದು  ಅವರು ಹೇಳಿದರು.
    ಈ ಮೊದಲು ನವೆಂಬರ್ 12 ರಂದು ಪಟೇಲ್ ಸಂಸದೀಯ ಸಮಿತಿಯ ಮುಂದೆ ಹಾಜರಾಗಬೇಕಿತ್ತು.
ಕೇಂದ್ರ ಸಕರ್ಾರ ಆರ್ ಬಿಐ ಕಾಯ್ದೆಯಲ್ಲಿ ಕಲಂ 7ನ್ನು ಜಾರಿಗೊಳಿಸುವುದು, ಬ್ಯ್ಂಕುಗಳಲ್ಲಿನ ಅನುತ್ಪಾದಕ ಆಸ್ತಿ ವಿವರ, ಬ್ಯಾಂಕುಗಳ ವಿಲೀನ ಮ್ಮೊದಲಾದ ವಿವಾದಾತ್ಮಕ ವಿಚಾರಗಳಿಗೆ ಪಟೇಲ್ ಉತ್ತರಿಸಲಿಲ್ಲ ಎಂದು ಮೂಲಗಳು ಹೇಳಿದೆ.
     ಸಮಿತಿಯ ಎದುರು ರಿಸವರ್್ ಬ್ಯಾಂಕ್ ಗವರ್ನರ್ ವಿಶ್ವ ಆಥರ್ಿಕತೆ ಹಾಗೂ ಭಾರತ ಆಥರ್ಿಕತೆಯ ಸ್ಥಿತಿಗತಿಗಳ ಕುರಿತು ವಿವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries