ಶಕ್ತಿನಗರದಲ್ಲಿ ಗಮನ ಸೆಳೆದ ತಾಳಮದ್ದಳೆ
0
ಡಿಸೆಂಬರ್ 16, 2018
ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕುಂಟಾರು ಮತ್ತು ಅತಿಥಿ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ಕೂಟವು ಉತ್ತಮ ರೀತಿಯಲ್ಲಿ ಮೂಡಿಬಂತು.
ಶಿವಭಕ್ತ ವೀರಮಣಿ ಪ್ರಸಂಗದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್ ಅಡ್ವಳ, ಕೃಷ್ಣ.ಕೆ ಕುಂಟಾರು, ಯಶೋದರ ಪಾಂಡಿ, ಚೆಂಡೆವಾದನದಲ್ಲಿ ಸದಾನಂದ ಮಯ್ಯಳ, ಮದ್ದಳೆ ವಾದನದಲ್ಲಿ ಶಿವದಾಸ ಕುಂಟಾರು ಸಹಕರಿಸಿದರು.
ಪಾತ್ರವರ್ಗದಲ್ಲಿ ಶತ್ರುಘ್ನನಾಗಿ ಮಾಧವ ಕುಂಟಾರು, ಕೃಷ್ಣೋಜಿ ರಾವ್ ಮಾಟೆ, ವೀರಮಣಿಯಾಗಿ ರವೀಂದ್ರ.ಎಚ್, ವೆಂಕಟ್ರಮಣ ಅಡೂರು, ರುಕ್ಮಾಂಗದನಾಗಿ ಜಗನ್ನಾಥ.ಎಚ್, ಹನುಮಂತನಾಗಿ ನಾರಾಯಣ ಮಣಿಯಾಣಿ ಮೂಲಡ್ಕ, ಈಶ್ವರನಾಗಿ ಜಯರಾಮ ಪಾಟಾಳಿ ಪಡುಮಲೆ, ರಾಮನಾಗಿ ಪದ್ಮನಾಭ ಕುಂಡಂಗುಳಿ ಭಾಗವಹಿಸಿದ್ದರು.


