ಕೇಂದ್ರೀಯ ಬ್ಯಾಂಕ್ ಆಡಳಿತ ಚೌಕಟ್ಟನ್ನು ಮತ್ತೊಮ್ಮೆ ಪರಿಶೀಲಿಸಲು ಆರ್ ಬಿಐ ಮಂಡಳಿ ಒಪ್ಪಿಗೆ!
0
ಡಿಸೆಂಬರ್ 14, 2018
ನವ ದೆಹಲಿ: ಹೊಸ ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಡಿ.14 ರಂದು ಕೇಂದ್ರೀಯ ಬ್ಯಾಂಕ್ ನ ಮಹತ್ವದ ಸಭೆ ನಡೆದಿದ್ದು, ಆಡಳಿತ ಚೌಕಟ್ಟಿಗೆ ಸಂಬಂಧಿಸಿದಂತೆ ಮತ್ತಷ್ಟು ಪರಿಶೀಲನೆ, ಚರ್ಚೆ ನಡೆಸಲು ಮಂಡಳಿ ಒಪ್ಪಿಗೆ ಸೂಚಿಸಿದೆ.
ಸತತ ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈಗಿನ ಆರ್ಥಿಕ ಪರಿಸ್ಥಿತಿ, ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿರುವ ಆರ್ಥಿಕ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಯಿತು, ಇದಷ್ಟೇ ಅಲ್ಲದೇ ಕ್ರೆಡಿಟ್ ಡೆಲಿವರಿ ಹಾಗೂ ಲಿಕ್ವಿಡಿಟಿ ಕುರಿತ ಚರ್ಚೆಯೂ ನಡೆದಿದೆ.
ಕೇಂದ್ರ ಸರ್ಕಾರ- ಆರ್ ಬಿಐ ನಡುವಿನ ತಿಕ್ಕಾಟದಿಂದ ಆಡಳಿತಾತ್ಮಕ ಚೌಕಟ್ಟಿನ ವಿಷಯ ಹೆಚ್ಚು ಮಹತ್ವ ಪಡೆದಿತ್ತು.


