ಕುಂಬಳೆ ಗ್ರಾಮ ಕಚೇರಿಯ ಮುಂದೆ ಕನ್ನಡಿಗರ ಪ್ರತಿಭಟನಾ ಸತ್ಯಾಗ್ರಹ
0
ಡಿಸೆಂಬರ್ 15, 2018
ಕುಂಬಳೆ: ಕೊೈಪಾಡಿ ಗ್ರಾಮ ಕಚೇರಿಯ ಗ್ರಾಮಾಧಿಕಾರಿ ಕನ್ನಡ ಅರ್ಜಿಗಳನ್ನು ಸ್ವೀಕರಿಸದೆ ಕನ್ನಡಿಗರನ್ನು ನಿಂದಿಸುವುದರ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಸತ್ಯಾಗ್ರಹ ನಡೆಯಿತು.
ಕುಂಬಳೆ ಗ್ರಾಮ ಕಚೇರಿಯ ಮುಂದೆ ಕನ್ನಡಿಗರ ಪ್ರತಿಭಟನಾ ಸತ್ಯಾಗ್ರಹವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅವರು ಉದ್ಘಾಟಿಸಿದರು. ಮಲಯಾಳಿ ಅಧಿಕಾರಿಗಳು ಕನ್ನಡಿಗರ ಮೇಲೆ ತೋರುವ ಮಲತಾಯಿ ಧೋರಣೆಯನ್ನು ಅವರು ಖಂಡಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್ ಭಟ್, ಹರೀಶ್ ಗಟ್ಟಿ, ಮಾಜಿ ಸದಸ್ಯ ಲೋಕನಾಥ ಆಳ್ವ, ಸಾಮಾಜಿಕ ಮುಂದಾಳುಗಳಾದ ಲಕ್ಷ್ಮಣ ಪ್ರಭು, ತಾರಾನಾಥ ಮಧೂರು, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಕಾಸರಗೋಡು, ವಿಶ್ವನಾಥ ರಾವ್, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನ್ಯಾಯವಾದಿ ರಾಮ ಪಾಟಾಳಿ, ಶೇಂತಾರು ನಾರಾಯಣ ಭಟ್, ದಿನೇಶ್ ಚೆರುಗೋಳಿ, ಸುರೇಶ್ ರಾವ್ ಮೊದಲಾದವರು ಮಾತನಾಡಿದರು.
ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸ್ವಾಗತಿಸಿ, ಸತೀಶ್ ಕೂಡ್ಲು ವಂದಿಸಿದರು. ಸುಜನಾ ಶಾಂತಿಪಳ್ಳ ಕಾರ್ಯಕ್ರಮ ನಿರೂಪಿಸಿದರು.


