ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ರಥದ ಭವ್ಯ ಶೋಭಾಯಾತ್ರೆ ಮತ್ತು ಯಾಗಾಶ್ವ ಯಾಗಭೂಮಿಗೆ
0
ಫೆಬ್ರವರಿ 10, 2019
ಉಪ್ಪಳ: ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24 ರ ವರೆಗೆ ನಡೆಯಲಿರುವ “ವಿಶ್ವಜಿತ್ ಅತಿರಾತ್ರ ಸೋಮಯಾಗ”ದ ಸಿದ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥವು ಭಾನುವಾರ (10.02.2019)ಯಾಗ ಭೂಮಿಗೆ ಯಾಗಾಶ್ವದ ಜೊತೆ ಆಗಮಿಸಿ ಸಮಾಪ್ತಿಗೊಂಡಿತು.
ಕೊಂಬು, ಕಹಳೆ, ಚೆಂಡೆ, ಜಾಗಟೆ ವಾದನಗಳೊಂದಿಗೆ ಮಾತೆಯರ ಪೂರ್ಣಕುಂಭ ಹಾಗೂ ಮುತ್ತುಕೊಡೆ ಮತ್ತು ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕೋಲಾಟ, ಯೋಗಾಚಾಪ್, ಕುಣಿತಭಜನೆಗಳೊಂದಿಗೆ ಉಪ್ಪಳದಿಂದ ಭವ್ಯ ಶೋಭಾಯಾತ್ರೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಚಾಲನೆ ನೀಡಿದರು. ಆಶ್ರಮದಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಹವನ, ಸಾಮೂಹಿಕ ಪಾರಾಯಣ ಮತ್ತು ಲಕ್ಷ್ಮೀಪೂಜೆಗಳು ನಡೆದವು. ಈ ಸಂದರ್ಭದಲ್ಲಿ ಭಕ್ತದಿಗಳು ಯಾಗಸೇವಾ ನಿಧಿಯನ್ನು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದರು.


