ವೀಡಿಯೋ: ಏರ್ ಶೋ ಅಂಗವಾಗಿ ಬೆಂಗಳೂರಿಗೆ ರಾಫೆಲ್ ಯುದ್ಧ ವಿಮಾನ ಆಗಮನ!
0
ಫೆಬ್ರವರಿ 14, 2019
ಬೆಂಗಳೂರು: ರಾಫೆಲ್ ಒಪ್ಪಂದ ಕುರಿತಂತೆ ದೇಶದ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿರುವ ನಡುವೆಯೇ ಮೂರು ಯುದ್ಧ ವಿಮಾನಗಳು ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿದಿಳಿದಿದೆ. ಇದೇ ತಿಂಗಳ 20ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಈ ವಿಮಾನಗಳು ಬೆಂಗಳೂರು ನಗರಕ್ಕೆ ಆಗಮಿಸಿದೆ.
ಮೂರರ ಪೈಕಿ ಎರಡು ವಿಮಾನಗಳು ಹಾರಾಟದ ಪ್ರದರ್ಶನ ನಡೆಸಿದರೆ ಒಂದನ್ನು ವೀಕ್ಷಣೆಗಿರಿಸಲಾಗಿದೆ.ಫೆ.20ರಿಂಡ 24ರವರೆಗೆ 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನ ನಿಕ ಪ್ರದರ್ಶನ ಬೆಂಗಳೂರು ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಳ್ಳಲಿದೆ.
ಈ ವೇಳೆ ದೇಶ ವಿದೇಶಗಳ 365 ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು ಇದರಲ್ಲಿ ಒಟ್ಟಾರೆ 31 ವಿಮಾನಗಳು ಆಗಸಾಲ್ಲಿ ಹಾರಾಟದ ಪ್ರದರ್ಶನಕ್ಕೆ ಸಜ್ಜಾಗಿದ್ದರೆ 22 ವಿಮಾನಗಳನ್ನು ವೀಕ್ಷಣೆಗೆ ಇರಿಸಲಾಗುವುದು.

