ಶತಮಾನದ ರೈಲು ನಿಲ್ದಾಣಕ್ಕೆ ಶಾಪ ಮೋಕ್ಷದ ನಿರೀಕ್ಷೆ ಹಿರಿಯ ರೈಲ್ವೇ ಅಧಿಕಾರಿಗಳು ಉಪ್ಪಳ ರೈಲು ನಿಲ್ದಾಣ ಸಂದರ್ಶನ
0
ಫೆಬ್ರವರಿ 21, 2019
ಉಪ್ಪಳ: ಜಿಲ್ಲೆಯ ಅತಿ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ 106 ವರ್ಷಗಳಷ್ಟು ಹಳಮೆಯ ಉಪ್ಪಳ ರೈಲು ನಿಲ್ದಾಣ ಅಭಿವೃದ್ಧಿಯ ಬೇಡಿಕೆ ಇರಿಸಿ ನಡೆಸುತ್ತಿದ್ದ ಚಳವಳಿಯ ಹಿನ್ನೆಲೆಯಲ್ಲಿ ಹಿರಿಯ ರೈಲ್ವೇ ಅಧಿಕಾರಿಗಳು ಉಪ್ಪಳ ರೈಲು ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಎಚ್.ಆರ್.ಪಿ.ಎಂ.(ಹ್ಯೂಮನ್ ರೈಟ್ಸ್ ಪೆÇ್ರಟೆಕ್ಷನ್ ಮಿಶನ್) ನೇತೃತ್ವದಲ್ಲಿ ನಡೆದ ಅನಿರ್ದಿಷ್ಟಾವಧಿ ಚಳವಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ ಕೇಂದ್ರ ರೈಲ್ವೇ ಸಚಿವ ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಉಪ್ಪಳ ಹಾಗು ಪಾಲ್ಘಾಟ್‍ನಲ್ಲಿ ಹಿರಿಯ ರೈಲ್ವೇಶ್ಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೇ ಸಚಿವ ಗೋಯಲ್ ಅವರ ನಿರ್ದೇಶದಂತೆ ಸೈಲ್ವೇ ಜಿ.ಎಂ. ಕುಲಶ್ರೇಷ್ಠ್, ಡಿ.ಆರ್.ಎಂ. ಪ್ರತಾಪ್ ಸಿಂಗ್ ಶಾಮಿ ನೇತೃತ್ವದಲ್ಲಿ ಹಿರಿಯ ರೈಲ್ವೇ ಅಧಿಕಾರಿಗಳು ಉಪ್ಪಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು.
ಉಪ್ಪಳ ರೈಲು ನಿಲ್ದಾಣವನ್ನು ಪರಂಪರಾಗತ ನಿಲ್ದಾಣವಾಗಿ ನೆಲೆಗೊಳಿಸಿ ನವೀಕರಿಸಲಾಗುವುದೆಂದೂ, ನೇತ್ರಾವತಿ ರೈಲುಗಾಡಿಗೆ ಟ್ರಯಲ್ ರನ್‍ಗೆ ಅನುಮತಿ ನೀಡಲಾಗುವುದೆಂದೂ ಭರವಸೆ ನೀಡಿದ್ದಾರೆ. ಪ್ರತ್ಯೇಕವಾಗಿ ಸಜ್ಜುಗೊಳಿಸಿದ ರೈಲು ಗಾಡಿಯಲ್ಲಿ ಬಂದಿಳಿದ ಮೂವತ್ತರಷ್ಟು ರೈಲ್ವೇ ಅಧಿಕಾರಿಗಳನ್ನು ಹ್ಯೂಮನ್ ರೈಟ್ಸ್ ಪೆÇ್ರಟೆಕ್ಷನ್ ಮಿಶನ್ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ, ಕೋಶಾಧಿಕಾರಿ ಎಂ.ವಿ.ಜಿ.ನಾಯರ್, ರಾಜ್ಯ ಅಧ್ಯಕ್ಷ ಕೈಲಾಸ್‍ನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ರಾಧಾಮಣಿಯಮ್ಮ, ಕಾರ್ಯಾಧ್ಯಕ್ಷ ಕೂಕಲ್ ಬಾಲಕೃಷ್ಣನ್, ಯುವಜನ ಸೆಲ್ ರಾಜ್ಯ ಅಧ್ಯಕ್ಷ ಡಾ.ಜಿಪ್ಸನ್ ವರ್ಗೀಸ್, ಕೋಶಾಧಿಕಾರಿ ನಾಸರ್ ಚೆರ್ಕಳ, ಜಿಲ್ಲಾ ಅಧ್ಯಕ್ಷ ಕೆ.ಬಿ.ಮುಹಮ್ಮದ್ ಕುಂಞÂ, ಚಳವಳಿ ಸಮಿತಿ ಅಧ್ಯಕ್ಷ ಕೆ.ಎಫ್ ಇಕ್ಬಾಲ್ ಉಪ್ಪಳ ಮೊದಲಾದವರು ಸ್ವಾಗತಿಸಿದರು.
ಸ್ಥಳೀಯರು, ಪ್ರಮುಖ ರಾಜಕೀಯ ಪಕ್ಷಗಳು ನೇತಾರರು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪದಾಧಿಕಾರಿಗಳು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರಿದ್ದರು.
ಮುಹ್ಮದ್ ಕೈಕಂಬ, ರಾಘವ ಚೇರಾಲ್, ಕೋಸ್ಮೋಸ್ ಹಮೀದ್, ಅಬು ತಾಮಂ, ಶುಕೂರ್ ಹಾಜಿ, ಬಿ.ವಿ.ರಾಜನ್, ಆಲಿ ಮಾಸ್ಟರ್, ಗೋಲ್ಡನ್ ಮೂಸಾ ಕುಂಞÂ, ಪಿ.ಎಂ.ಸಲೀಂ, ಹರೀಶ್ಚಂದ್ರ, ಜಮೀಲ ಅಹ್ಮದ್, ಬಾಲಮಣಿ ಟೀಚರ್, ಶರೀಫ್ ಮುಗು, ಗೋಲ್ಡನ್ ರಹಮ್ಮಾನ್, ರಮಣನ್ ಮಾಸ್ಟರ್, ಹನೀಫ್ ರೈನ್‍ಬೋ, ಮೆಹಮೂದ್ ಸೀಗಂಡಡಿ, ಜಬ್ಬಾರ್ ಪಳ್ಳಂ ಶಂಸು ಕುಬಣೂರು, ಗಿರೀಶ್ ಪೆÇದುವಾಳ್, ಕೊಟ್ಟಾರಂ ಅಬೂಬಕ್ಕರ್, ನ್ಯಾಯವಾದಿ ಕರೀಂ ಪೂನಾ, ಸುಜಾತ ಶೆಟ್ಟಿ, ಅಶ್ರಫ್ ಮದರ್ ಆಟ್ರ್ಸ್, ಸುಬೈರ್ ಮಾಳಿಗ ಮೊದಲಾದವರು ನೇತೃತ್ವ ನೀಡಿದರು.

