ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ನೇತೃತ್ವದಲ್ಲಿ ಹುತಾತ್ಮ ಯೋಧರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಇತ್ತೀಚೆಗೆ ಏರ್ಪಡಿಸಲಾಯಿತು.
ಅಗಲಿದ ಯೋಧರ ಭಾವಚಿತ್ರದ ಎದುರು ಹಣತೆಗಳನ್ನು ಬೆಳಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನೆರೆದವರೆಲ್ಲರೂ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಮಾಜಿ ಯೋಧ ವಿಷ್ಣು ಪ್ರಸಾದ್ ಚೈತ್ರ ಸೇನೆಯಲ್ಲಿನ ತಮ್ಮ ಅನುಭವವನ್ನು ವಿವರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ ಕೆ.ನರಸಿಂಹ ಭಟ್ ನುಡಿ ನಮನ ಸಲ್ಲಿಸಿದರು. ಸ್ಥಳೀಯ ವಾರ್ಡ್ ಸದಸ್ಯೆ ಶೈಲಜಾ ನಡುಮನೆ,ಡಾ.ಮೋಹನ ಕುಮಾರ್ ವೈ.ಎಸ್, ಮಹೇಶ ಏತಡ್ಕ., ಉಪಸ್ಥಿತರಿದ್ದು ಮಾತನಾಡಿದರು. ವೈ.ಕೆ. ಗಣಪತಿ ಭಟ್ ಸ್ವಾಗತಿಸಿ, ಡಾ.ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು. ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.
