ಮಂಜೇಶ್ವರ: ಕುಳೂರು ಚಿನಾಲದ ನವಯುವಕ ಕಲಾವೃಂದದ 54ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಚಿನಾಲದಲ್ಲಿ ನಡೆಯಿತು.
ಕಲಾವೃಂದದ ಅಧ್ಯಕ್ಷ ಮೋನಪ್ಪ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್ ಹಾಗೂ ಯಕ್ಷಗಾನ ಸಂಯೋಜಕ ಸಂಕಬೈಲು ಸತೀಶಡಪ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ನವಯುವಕ ಲೈಬ್ರರಿ ಅಧ್ಯಕ್ಷ ಯೋಗೀಶ್ ಕಲ್ಯಾಣತ್ತಾಯ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಆಚಾರ್ಯ ಸ್ವಾಗತಿಸಿ, ಅವಿನಾಶ್ ಡಿ ವರದಿ ವಾಚಿಸಿದರು. ಲವಾನಂದ ಎಲಿಯಾಣ ವಂದಿಸಿದರು. ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಸಿಹಿತ್ಲು ಶ್ರೀಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಶ್ರೀಭಗವತೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
