ಅಖಿಲ ಭಾರತ ಸರಕು ನೌಕಾ ಸಿಬ್ಬಂದಿಗಳ ಒಕ್ಕೂಟದಿಂದ ಉಚಿತ ವೈದ್ಯಕೀಯ ಶಿಬಿರ
0
ಫೆಬ್ರವರಿ 18, 2019
ಮಂಜೇಶ್ವರ : ಕಳೆದ ಹಲವಾರು ವರ್ಷಗಳಿಂದ ಸರಕು ನೌಕಾ ಸಿಬ್ಬಂದಿಗಳ ಆಶಾಕಿರಣವಾಗಿ ಕಾರ್ಯಾಚರಿಸುತ್ತಿರುವ ನೇಷನಲ್ ಯೂನಿಯನ್ ಆಫ್ ಸೀ ಫೇರರ್ಸ್ ಆಫ್ ಇಂಡಿಯಾ ಹಾಗೂ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇವರ ವತಿಯಿಂದ ಉಪ್ಪಳದ ಹಳೆಯ ಹಿಂದೂಸ್ಥಾನ ಶಾಲಾ ಆವರಣದಲ್ಲಿ ಭಾನುವಾರ ಬೃಹತ್ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಸಂಘಟನೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಹಾಫಿಝ್ ಬಿ ಎಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಂಗಲ್ಪಾಡಿ ಗ್ರಾ. ಪಂ. ಅಧ್ಯಕ್ಷ ಶಾಹಲ್ ಹಮೀದ್, ಮಂಗಲ್ಪಾಡಿ ಗ್ರಾ. ಪಂ. ಉಪಾಧ್ಯಕ್ಷೆ ಜಮೀಲ ಸಿದ್ದೀಖ್, ಕಣಚೂರು ವೈದ್ಯಕೀಯ ಕಾಲೆಜಿನ ನಿರ್ದೇಶಕ ಅಬ್ದುಲ್ ರಹ್ಮಾನ್, ಹನಫಿ ಅಹ್ಲೇ ಸುನ್ನತ್ ಜಮಾಹತ್ ಅಧ್ಯಕ್ಷ ಬಶೀರ್ ಆಹ್ಮದ್ ಬಿ ಎಸ್, ವ್ಯಾಪಾರಿ ನೇತಾರ ಮೊಹಮ್ಮದ್ ರಫೀಕ್ ಕೆ ಐ, ಯುವ ಮೋರ್ಛಾ ರಾಜ್ಯ ಕೋಶಾಧಿಕಾರಿ ವಿಜಯ ಕುಮಾರ್ ರೈ, ಸಿಪಿಐ (ಎಂ) ನೇತಾರ ರಮಣನ್ ಮಾಸ್ಟರ್, ನ್ಯಾಯವಾದಿ ಅಬ್ದುಲ್ ಕರೀಂ ಪೂನ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮೂಳೆ ತಜ್ಞರು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು. ಕಿವಿ ಮೂಗು, ಗಂಟಲು ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು ರೋಗಿಗಳ ತಪಾಸಣೆ ನಡೆಸಿದರು. ಉಚಿತ ರಕ್ತ ತಪಾಸನೆ ಹಾಗೂ ಉಚಿತ ಅಷಧಿಗಳನ್ನು ವಿತರಿಸಲಾಯಿತು.
ಶಿಬಿರದಲ್ಲಿ ನೂರಾರು ಮಂದಿ ರೋಗಿಗಳು ಪಾಲ್ಗೊಂಡರು. ಮೊಹಮ್ಮದ್ ಅಝಿಂ ಮಣಿಮುಂಡ ಸ್ವಾಗತಿಸಿ ಅಶ್ರಫ್ ರಂಜಾನ್ ವಂದಿಸಿದರು.

