ಬೇಳ ಶೋಕಮಾತಾ ಪುಣ್ಯಕ್ಷೇತ್ರದ, ವಾರ್ಷಿಕ ಮಹೋತ್ಸವಕ್ಕೆ ಚಾಲನೆ
0
ಫೆಬ್ರವರಿ 18, 2019
ಬದಿಯಡ್ಕ: ಬೇಳ ಶೋಕಮಾತಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಸೋಮವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ರಾಕ್ಣೊ ವಾರಪತ್ರಿಕೆಯ ಸಂಪಾದಕರಾದ ವಂದನೀಯ ಸ್ವಾಮಿ ವಲೇರಿಯನ್ ಫೆರ್ನಾಂಡಿಸ್ ಅವರು ಚಾಲನೆ ನೀಡಿದರು.
ಬಳಿಕ ವಿಘ್ನ ನಿವಾರಕ ಸಂತ ಸೆಬಾಸ್ಟಿಯನ್ ಅವರ ಹಬ್ಬದ ಸಂಭ್ರಮದ ಬಲಿಪೂಜೆ ಹಾಗೂ ಮೆರವಣಿಗೆ ಜರಗಿತು. ಕಾರ್ಯಕ್ರಮಗಳ ಮುಂದಾಳುತ್ವವನ್ನು ಕಾಸರಗೋಡು ವಲಯದ ಪ್ರಧಾನ ಧರ್ಮಗುರುಗಳು ಹಾಗೂ ಬೇಳ ಶೋಕಮಾತ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಾಳದ ಅತೀ ವಂದನೀಯ ಸ್ವಾಮಿ ಜೋನ್ ವಾಸ್‍ರವರು ವಹಿಸಿದ್ದರು. ವಂದನೀಯ ಸ್ವಾಮಿ ಆಶೋಕ್ ರಾಯನ್ ಕ್ರಾಸ್ತ ಉಪಸ್ಥಿತರಿದ್ದರು.


