ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಾರ್ಷಿಕೋತ್ಸವ
0
ಫೆಬ್ರವರಿ 18, 2019
ಪೆರ್ಲ: ತೆಂಕುತಿಟ್ಟಿನಲ್ಲಿ ಪ್ರಸ್ತುತ ಏಕೈಕ ಯಕ್ಷಗಾನ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಯ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 14 ನೇ ವರ್ಷದ ವಾರ್ಷಿಕೋತ್ಸವ, ಪಡ್ರೆ ಚಂದು ಜನ್ಮಶತಮಾನೋತ್ಸವದ ಕಾರ್ಯಕ್ರಮ ಉದ್ಘಾಟನೆ, ಪ್ರಶಸ್ತಿ ಪ್ರದಾನ ಹಾಗು ಮಕ್ಕಳ ಯಕ್ಷಗಾನ ಬಯಲಾಟ ಫೆ.22 ಮತ್ತು 23 ರಂದು ನಡೆಯಲಿದೆ.
ಫೆ.22 ರಂದು ಬೆಳಗ್ಗೆ 10 ಕ್ಕೆ ಗಣಪತಿ ಹೋಮ, ಸಂಜೆ 5 ರಿಂದ ರಂಗ ಪ್ರವೇಶ ವಿದ್ಯಾರ್ಥಿಗಳಿಂದ `ಶ್ರೀ ಕೃಷ್ಣ ವಿಜಯ' ಯಕ್ಷಗಾನ ಬಯಲಾಟ, 6 ರಿಂದ ಪಡ್ರೆ ಚಂದು ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗು ನುಡಿನಮನ, ಸಭಾ ಕಾರ್ಯಕ್ರಮ ನಡೆಯಲಿದೆ. ವೇ|ಮೂ|ಬ್ರಹ್ಮಶ್ರೀ ರಾಘವೇಂದ್ರ ಭಟ್ ಉಡುಪುಮೂಲೆ ಆಶೀರ್ವಚನ ನೀಡುವರು. ಟಿ.ಜಿ.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸುವರು. ಪದ್ಮನಾಭ ರಾವ್ ಉದ್ಘಾಟಿಸುವರು. ಕೋಟೆ ರಾಮ ಭಟ್ ನುಡಿನಮನ ಸಲ್ಲಿಸುವರು. ವಿದ್ವಾನ್ ಎಸ್.ಬಿ.ಖಂಡಿಗೆ, ಆನಂದ ಭಟ್ ಮದಂಗಲ್ಲು ಅವರನ್ನು ಸಮ್ಮಾನಿಸಲಾಗುವುದು. ಎಸ್.ವಿ.ಭಟ್, ಚಂದ್ರಶೇಖರ ಏತಡ್ಕ ಅಭಿನಂದನಾ ಭಾಷಣ ಮಾಡುವರು. ವಿ.ಬಿ.ಕುಳಮರ್ವ ಮತ್ತು ಬಾಲಕೃಷ್ಣ ಏಳ್ಕಾನ ಗುರುವಂದನೆ ಸಲ್ಲಿಸುವರು. ಅರವಿಂದ ಕುಮಾರ್ ಅಲೆವೂರಾಯ ನೇರಪಾಡಿ, ನಾಗರಾಜ್ ಭಟ್ ಅಭ್ಯಾಗತರಾಗಿ ಭಾಗವಹಿಸುವರು. ರಾತ್ರಿ 7.45 ರಿಂದ ಯಕ್ಷಗಾನ ಜರಗಲಿದೆ.
ಫೆ.23 ರಂದು ಬೆಳಿಗ್ಗೆ 9.50 ಕ್ಕೆ ಗಣಪತಿ ಹೋಮ, 10.30 ಕ್ಕೆ ಸತ್ಯನಾರಾಯಣ ಪೂಜೆ, 11 ಕ್ಕೆ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 2.30 ಕ್ಕೆ ಗಾನ ವೈಭವ, 4 ಕ್ಕೆ ಪೂರ್ವರಂಗ, 5.15 ಕ್ಕೆ ಯಕ್ಷಗಾನ ಬಯಲಾಟ, ರಾತ್ರಿ 7 ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಂತರಾಮ ಕುಡ್ವ ಉದ್ಘಾಟಿಸುವರು. ದೇವಕಾನ ಕೃಷ್ಣ ಭಟ್, ಎಂ.ಕೆ.ರಾಮಚಂದ್ರ ಭಟ್, ಶ್ರೀನಿವಾಸ ಭಟ್ ಸೇರಾಜೆ ಅಭಿನಂದನಾ ಭಾಷಣ ಮಾಡುವರು. ಪದ್ಯಾಣ ಗಣಪತಿ ಭಟ್ ಅವರಿಗೆ ಪಡ್ರೆ ಚಂದು ಪ್ರಶಸ್ತಿ, ಉಬರಡ್ಕ ಉಮೇಶ ಶೆಟ್ಟಿ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ರಾಧಾ ಮಾಸ್ಟರ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಕೇಶ್ ಕುಮಾರ್ ಕಮ್ಮಾಜೆ, ಡಾ.ಎಸ್.ಎನ್.ಭಟ್, ಶಾಂತ ಕುಂಟನಿ, ಅರವಿಂದ ಮಾಸ್ಟರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸುವರು. ರಾತ್ರಿ 8.30 ರಿಂದ ಯಕ್ಷಗಾನ ಬಯಲಾಟ ನಡೆಯುವುದು.

