ಮಣ್ಣು ಕುಸಿತ : ಬಾವಿಕೆರೆ ತಡೆಗೋಡೆ ಕಾಮಗಾರಿ ಸ್ಥಗಿತ
0
ಫೆಬ್ರವರಿ 18, 2019
ಮುಳ್ಳೇರಿಯ: ಹೊಳೆ ಬದಿಯ ಮಣ್ಣು ಕುಸಿಯಲಾರಂಭಿಸಿದುದರಿಂದ ಬಾವಿಕೆರೆ ತಡೆಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಖಾಯಂ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಂತೆ ಮಣ್ಣು ಕುಸಿಯಲು ಆರಂಭಿಸಿದುದರಿಂದ ಕಾಮಗಾರಿ ಮುಂದುವರಿಸಲು ಅಡ್ಡಿಯಾಗಿದೆ. ಹೊಳೆ ಬದಿಯ ಖಾಸಗಿ ವ್ಯಕ್ತಿಗಳ ಮಾಲಕತ್ವದಲ್ಲಿರುವ ಸ್ಥಳದ ಮಣ್ಣು ಕುಸಿದು ಹೊಳೆಗೆ ಬೀಳಲಾರಂಭಿಸಿದೆ.
ಕಾಮಗಾರಿಗೆ ತಡೆಯುಂಟಾದ ಹಿನ್ನೆಲೆಯಲ್ಲಿ ಶಾಸಕ ಕೆ.ಕುಂಞÂರಾಮನ್, ಜನಪ್ರತಿನಿ„ಗಳು, ಗ್ರಾಮೀಣ ಕ್ರಿಯಾ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಪ್ರಸ್ತುತ ಪರಿಸ್ಥಿತಿಯನ್ನು ನಿವಾರಿಸಲು ಫೈಲಿಂಗ್ ಅಗತ್ಯವಾಗಿ ಬೇಕೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆಂದು ಶಾಸಕ ಕೆ.ಕುಂಞÂರಾಮನ್ ಹೇಳಿದ್ದಾರೆ. ಅಥವಾ ಹೊಳೆ ಬದಿಯಲ್ಲಿ ಸಂರಕ್ಷಣಾ ಗೋಡೆ ನಿರ್ಮಿಸಬೇಕಾಗಬಹುದು.
ಬಾವಿಕೆರೆ ತಡೆಗೋಡೆ ನಿರ್ಮಾಣದೊಂದಿಗೆ ಟ್ರ್ಯಾಕ್ಟರ್‍ವೇ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಆದರೆ ಪ್ರಸ್ತುತ ರೂಪು ಕಲ್ಪನೆ ಪ್ರಕಾರ 16 ಮೀಟರ್ ಎತ್ತರದಲ್ಲಿ ತಡೆಗೋಡೆ ನಿರ್ಮಿಸಿದರೆ ಇದರಲ್ಲಿ ಕಾಲ್ನಡೆ ದಾರಿಯಾಗಿ ಬಳಸಲು ಸಾಧ್ಯವಾಗದು ಎಂಬುದಾಗಿ ಶಾಸಕ ಕೆ.ಕುಂಞÂರಾಮನ್ ಹೇಳಿದ್ದಾರೆ. ತಡೆಗೋಡೆಯ ಮೇಲಿನಿಂದ ಜನರಿಗೆ ನಡೆದು ಹೋಗಲು ಅನುಕೂಲವಾಗುವಂತೆ ತಡೆಗೋಡೆ ನಿರ್ಮಾಣವಾಗಬೇಕೆಂಬುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಬಾವಿಕೆರೆಯಲ್ಲಿ ತಡೆಗೋಡೆ ನಿರ್ಮಿಸಿ ಕಾಸರಗೋಡು ನಗರಸಭೆ ಮತ್ತು ಚೆಂಗಳ, ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತ್‍ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಹಲವು ಬಾರಿ ತಾಂತ್ರಿಕ ಹಾಗು ಅಡ್ಡಿಗಳು ಎದುರಾದುದರಿಂದ ಕಾಮಗಾರಿ ಹಲವು ಬಾರಿ ನಿಲುಗಡೆಗೊಂಡಿತ್ತು. ಇದೀಗ ಕಾಮಗಾರಿ ನಡೆಯುತ್ತಿರುವ ತಡೆಗೋಡೆ ನಿರ್ಮಾಣ ಶೀಘ್ರವೇ ಪೂರ್ತಿಗೊಳಿಸಿ ಹಲವು ವರ್ಷಗಳ ಕನಸು ನನಸು ಮಾಡಲಾಗುವುದೆಂದು ಶಾಸಕರಾದ ಕೆ.ಕುಂಞÂರಾಮನ್ ಹೇಳಿದ್ದಾರೆ. ಇವರೊಂದಿಗೆ ಮಾಜಿ ಶಾಸಕ ಕೆ.ವಿ.ಕುಂಞÂರಾಮನ್ ಉಪಸ್ಥಿತರಿದ್ದರು.

