ಮೇಲ್ಪರಂಬ ಪೆÇಲೀಸ್ ಠಾಣೆ ಲೋಕಾರ್ಪಣೆ ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಿದ ಮುಖ್ಯಮಂತ್ರಿ
0
ಫೆಬ್ರವರಿ 18, 2019
ಕಾಸರಗೋಡು: ಪೆÇಲೀಸರು ಯಾವತ್ತೂ ಜನಸೇವಕರು. ಜನಮೈತ್ರಿ ಪೆÇಲೀಸರು ರಾಜ್ಯದಾದ್ಯಂತ ಯಶಸ್ವಿಯಾಗಿರುವುದು ಇದರ ಸಂಕೇತ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಚಟ್ಟಂಚಾಲ್‍ನಲ್ಲಿ ಮೇಲ್ಪರಂಬ ಪೆÇಲೀಸ್ ಠಾಣೆಯನ್ನು ಭಾನುವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ನಿರ್ವಹಣೆಯಲ್ಲಿ ಜನತೆಯ ಜೊತೆಗೆ ಇರುವುದು ಮತ್ತು ಸಾರ್ವಜನಿಕರಲ್ಲಿ ಬಹುಪಾಲು ಮಂದಿ ಬಡವರಾಗಿರುವ ಹಿನ್ನೆಲೆಯಲ್ಲಿ ಅವರ ಜೊತೆಗೆ ನಿಲ್ಲುವುದು ರಾಜ್ಯ ಸರಕಾರದ ನೀತಿ. ಈ ನಿಟ್ಟಿನಲ್ಲಿ ಪೆÇಲೀಸರ ಹೊಣೆ ಅಧಿಕವಾಗಿದ್ದು, ಅವರು ಜಾಗ್ರತೆಯಿಂದ ವರ್ತಿಸಬೇಕಾಗಿದೆ. ಜನತೆಗೆ ಪೂರ್ಣರೂಪದ ಸುರಕ್ಷೆ ಖಚಿತ ಪಡಿಸಬೇಕಾದುದು ಪೆÇಲೀಸ್ ಇಲಾಖೆಯ ಪ್ರಧಾನ ಕರ್ತವ್ಯ ಎಂದವರು ಹೇಳಿದರು.
ಕೊಚ್ಚಿ ಮೆಟ್ರೊ ಪೆÇಲೀಸ್ ಠಾಣೆ ಸಹಿತ 6 ಠಾಣೆಗಳನ್ನು ಈ ಮೂಲಕ ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದ್ದಾರೆ.
ಶಾಸಕ ಕೆ.ಕುಂಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಕರುಣಾಕರನ್ ಪ್ರಧಾನ ಭಾಷಣ ಮಾಡಿದರು. ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಟ್ರ ಅಬ್ದುಲ್ ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಸುಫಯ್ಯ ಅಬೂಬಕ್ಕರ್, ಬ್ಲಾಕ್ ಪಂಚಾಯತ್ ಸದಸ್ಯೆ ಅಜನ್ನ ಎ.ಪವಿತ್ರನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ಸ್ವಾಗತಿಸಿದರು. ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ `ಞõÁನ್ ಅನಘಾ' ಎಂಬ ನಾಟಕ ಪ್ರಸ್ತುತಗೊಂಡಿತು.

