ಬದಿಯಡ್ಕ: ವಿಭಿನ್ನ ಸಾಮಥ್ರ್ಯದವರ ಕ್ಷೇಮಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯಾದ ಸಮದೃಷ್ಟಿ ಕ್ಷಮತಾ ವಿಕಾಸ್ ಮಂಡಲ (ಸಕ್ಷಮ)ದ 3ನೇ ಕಾಸರಗೋಡು ಜಿಲ್ಲಾ ಸಮ್ಮೇಳನವು ಭಾನುವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು.
ಸಮ್ಮೇಳನವನ್ನು ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರಾದ ನಮ್ಮ ಸಹೋದರರ ಸಹೋದರಿಯರು ಎಲ್ಲರಿಂದ ಗೌರವಿಸಲ್ಪಡುವವರಾಗಿದ್ದಾರೆ. ಅವರು ತಮ್ಮ ವೈಕಲ್ಯತೆಯನ್ನು ಮೆಟ್ಟಿನಿಂತು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಸಕ್ಷಮ ಸಂಘನೆಯು ಕಾರ್ಯೋನ್ಮುಖವಾಗಿರುವುದು ಸಂತಸದ ವಿಚಾರವಾಗಿದೆ. ದಿವ್ಯಾಂಗರಿಗೆ ಸರಕಾರದಿಂದ ಲಭಿಸುವ ವಿವಿಧ ಅನುಕೂಲತೆಗಳನ್ನು ಒದಗಿಸಿಕೊಡುವಲ್ಲಿ ಸಂಘಟನೆಯ ಶ್ರಮವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಕ್ಷಮ ರಾಜ್ಯ ಉಪಾಧ್ಯಕ್ಷ ಸುಧಾಕರ ಮಾಸ್ತರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಕ್ಷಮ ಕಣ್ಣೂರು ಜಿಲ್ಲಾ ಸಮಿತಿಯ ಡಾ.ರಜತ್ ರವೀಂದ್ರನ್, ತಂಬಾನ್ ಮಾವುಂಗಾಲ್, ಬಿ. ವೇಣುಗೋಪಾಲನ್, ಸುರೇಶ್ ನಾಯ್ಕ್, ಗೀತಾ ಬಾಬು ರಾಜ್, ಅಶೋಕ್ ನಾಯ್ಕ್, ಸಿ.ಸಿ.ಭಾಸ್ಕರನ್, ಪವಿತ್ರನ್ ಕೆ.ಕೆ.ಪುರಂ ಮಾತನಾಡಿದರು.
ಎಲ್ಲಾ ವಿಭಾಗದ ದಿವ್ಯಾಂಗರಿಗೂ ವೈದ್ಯಕೀಯ ಪ್ರಮಾಣ ಪತ್ರ ಲಭಿಸಲು ಅಗತ್ಯವುಳ್ಳ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು, ತ್ರಿತಲ ಪಂಚಾಯತ್‍ಗಳಲ್ಲಿ ದಿವ್ಯಾಂಗರಿಗೆ ಅರ್ಹವಾಗಿ ಸಿಗಬೇಕಾದ ಸವಲತ್ತುಗಳಿಗಿರುವ ಮೊತ್ತವನ್ನು ಇತರ ಯೋಜನೆಗಳಿಗೆ ಬಳಸಬಾರದು ಎಂಬ ಬೇಡಿಕೆಗಳನ್ನು ಸರಕಾರದ ಮುಂದಿಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಸುಧಾಕರನ್ ಮಾಸ್ತರ್, ಉಪಾಧ್ಯಕ್ಷರಾಗಿ ಶಿಖ ಎನ್.ಪಿ., ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ್ ಕಾಸರಗೋಡು, ಜೊತೆಕಾರ್ಯದರ್ಶಿಯಾಗಿ ಪಿ.ವಿ.ರತೀಶ್ ಚಾಳಕ್ಕಾಲ್, ಕೋಶಾಧಿಕಾರಿಯಾಗಿ ರಘುನಾಥ್ ಕಾಞಂಗಾಡು ಅವರನ್ನು ಆರಿಸಲಾಯಿತು.
