ಚುನಾವಣೆ : ಮತದಾನಕ್ಕೆ ಗುರುತು ಚೀಟಿ ಕಡ್ಡಾಯ : ಜಿಲ್ಲಾಧಿಕಾರಿ
0
ಮಾರ್ಚ್ 21, 2019
ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ನಡೆಸುವ ನಿಟ್ಟಿನಲ್ಲಿ ಮತದಾತರ ಗುರುತು ಚೀಟಿ ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾ„ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಶೇ.99 ಮಂದಿ ಮತದಾರರಿಗೆ ಚುನಾವಣೆ ಆಯೋಗ ನೀಡುವ ಇಲೆಕ್ಟರ್ಸ್ ಫೆÇೀಟೋ ಐಡೆಂಟಿಟಿ ಕಾರ್ಡ್ (ಇ.ಪಿ.ಐ.ಸಿ.) ಲಭಿಸಿದೆ. ಮತದಾನದ ದಿನ ಮತಗಟ್ಟೆಯಲ್ಲಿ ಈ ಗುರುತು ಚೀಟಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಅದು ಸಾಧ್ಯವಾಗದೇ ಇರುವವರಿಗೆ ಚುನಾವಣೆ ಆಯೋಗ ಅಂಗೀಕರಿಸಿದ 11 ರೀತಿಯ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದು ಹಾಜರುಪಡಿಸಿ ಮತದಾನ ನಡೆಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ಪಾಸ್ ಪೆÇೀರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ-ರಾಜ್ಯ ಸರಕಾರಿ ಕಚೇರಿಗಳ, ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿಯ ಫೆÇೀಟೋ ಸಹಿತ ಗುರುತು ಚೀಟಿ, ಫೆÇೀಟೋ ಸಹಿತದ ಬ್ಯಾಂಕ್, ಫೆÇೀಸ್ಟ್ ಆಫೀಸ್ ಪಾಸ್ ಪುಸ್ತಕ, ಪಾನ್ ಕಾರ್ಡ್, ಆರ್.ಜಿ.ಐ. ಸ್ಮಾರ್ಟ್ ಕಾರ್ಡ್, ಉದ್ಯೋಗ ಖಾತರಿ ಯೋಜನೆಯ ಕಾರ್ಡ್, ಉದ್ಯೋಗ ಸಚಿವಾಲಯದಿಂದ ಲಭಿಸುವ ಆರೋಗ್ಯ ವಿಮಾ ಕಾರ್ಡ್, ಫೆÇೀಟೋ ಸಹಿತದ ಪಿಂಚಣಿ ದಾಖಲೆ, ಸಂಸದ, ಶಾಸಕರ ಗುರುತು ಚೀಟಿ ಇತ್ಯಾದಿ ಚುನಾವಣೆ ಗುರುತು ಚೀಟಿಯ ಬದಲಿಗೆ ಹಾಜರುಪಡಿಸಿ ಮತದಾನ ನಡೆಸಬಹುದು ಎಂದವರು ತಿಳಿಸಿರುವರು. ಚುನಾವಣೆ ಗುರುತು ಚೀಟಿಯಲ್ಲಿ ಚಿಕ್ಕರೂಪದಲ್ಲಿ ಅಕ್ಷರ ತಪ್ಪು ಇದ್ದರೆ, ಆ ಕಾರಣದಿಂದ ಮತದಾನ ನಿಷೇಧ ನಡೆಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

