ಬದಿಯಡ್ಕ: ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿರುವ ಕವಿ ಕಯ್ಯಾರರ ಸಾಹಿತ್ಯ ಸೇವೆ, ಸಾಮಾಜಿಕ ಕಳಕಳಿ, ಭಾಷಾ ಪ್ರೇಮ ಹಾಗೂ ಕನ್ನಡಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅಸಾಮಾನ್ಯ ವ್ಯಕ್ತಿತ್ವದವರಾಗಿದ್ದ ಆ ಹಿರಿಯ ಚೇತನ ನಮಗೆ ದಾರಿದೀಪ. ಕಯ್ಯಾರ ಸಾಂಸ್ಕøತಿಕ ಭವನ ನಿರ್ಮಾಣ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಕರ್ನಾಟಕ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿಯವರು ಹೇಳಿದರು.
ಅವರು ಕಯ್ಯಾರ ಕಿ ಞÂ್ಞ ಣ್ಣ ರೈಗಳ ಮನೆ ಕವಿತಾ ಕುಟೀರವನ್ನು ಶನಿವಾರ ಸಂದರ್ಶಿಸಿ ಮಾತನಾಡಿದರು.
ಕನ್ನಡ ನಾಡಿನ ಏಕೀಕರಣ, ವಿಲೀನೀಕರಣ ಮತ್ತು ಗಡಿನಾಡ ಕನ್ನಡ ಹೋರಾಟಗಲಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಕಯ್ಯಾರರ ಬರಹಳ ಸೆಳೆತ ಅಂತರಾಳದೊಳಗೆ ಪ್ರತಿಫಲನಗೊಂಡು ಕ್ರಿಯಾತ್ಮಕತೆಗೆ ಕಾರಣವಾಗಿದೆ. ಗಡಿನಾಡ ಜನರ ಅಸ್ಮಿತೆಯ ಸಂಕೇತರಾಗಿದ್ದ ಕಯ್ಯಾರರ ಕವಿತಾ ಕುಟೀರದ ಸಂರಕ್ಷಣೆ ಕನ್ನಡಿಗರೆಲ್ಲರ ಹೊಣೆ ಎಂದು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಯದರ್ಶಿ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು. ಪೆÇ್ರ.ಎ. ಶ್ರೀನಾಥ್ ಕಯ್ಯಾರರ ಪುಸ್ತಕಾಲಯದ ಈಗಿನ ಸ್ಥಿತಿಗತಿ ಮತ್ತು ಸಾಂಸ್ಕøತಿಕ ಭವನದ ಪ್ರಾಧಾನ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸುಧಾಮ ಗೋಸಾಡ ಉಪಸ್ಥಿತರಿದ್ದರು. ಕಯ್ಯಾರರ ಪುತ್ರ ಪ್ರದೀಪ್ ಕುಮಾರ್ ರೈ ಅವರು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತು ಆರತಿ ಪ್ರದೀಪ್ ಕುಮಾರ್ ರೈ ವಸುಂಧರಾ ಭೂಪತಿಯವರನ್ನು ಶಾಲು ಹೊದಿಸಿ ಕಯ್ಯಾರರ ಪುಸ್ತಕಗಳನ್ನು ನೀಡಿ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಮೀಡಿಯಾ ಕ್ಲಾಸಿಕಲ್ ವಂದಿಸಿದರು. ಈ ಸಂದರ್ಭ ಗಣ್ಯರು ಕವಿತಾ ಕುಟೀರದಲ್ಲಿರುವ ಕಯ್ಯಾರರ ಪ್ರಶಸ್ತಿಗಳು, ಪುಸ್ತಕಾಲಯಗಳನ್ನು ವೀಕ್ಷಿಸಿದರು.
ಅಭಿಮತ:
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ಇತರ ಸಂಘಟನೆಗಳು ಕಯ್ಯಾರರ ಹುಟ್ಟುಹಬ್ಬದಂತಹ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಅವರ ಸಾಧನೆ ಮತ್ತು ಸಂದೇಶಗಳನ್ನು ನೆನಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಕಾಸರಗೋಡು ಮಾತ್ರವಲ್ಲದೆ ಕರ್ನಾಟಕ ಕಂಡ ಮಹಾಕವಿ ಕಯ್ಯಾರರು. ಅವರ ಆದರ್ಶ ಮತ್ತು ಭಾಷೆಯ ಸಂರಕ್ಷಣೆಗಾಗಿ ಮಾಡಿದ ಹೋರಾಟಗಳು ಬೆಂಕಿ ಬಿದ್ದಿದೆ ಮನೆಗೆ ಎನ್ನುವ ಮೂಲಕ ಜನರಿಗೆ ಎಚ್ಚರಿಕೆಯ ಗಂಟೆ ಮೊಳಗಿಸಿ ಜಾಗೃತಿಯ ಕರೆ ನೀಡಿದ ಕಯ್ಯಾರರು ಪ್ರಾತಃಸ್ಮರಣೀಯರು.
ಕರ್ನಾಟಕ ಸರಕಾರದ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ.


