ಉಪ್ಪಳ: ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಸರಕಾರದ `ಹಸಿರು ಸಹಕಾರ' ಕಾರ್ಯಕ್ರಮದ ಅಂಗವಾಗಿ ಬ್ಯಾಂಕ್‍ನ ಪ್ರಧಾನ ಕಚೇರಿಯಲ್ಲಿ ಪ್ರಕೃತಿ ಸಂರಕ್ಷಣೆ ಕುರಿತಾದ ವಿಚಾರ ಸಂಕಿರಣ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಾಯಾರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುಬ್ಣಣ್ಣ ಭಟ್ ಉಳುವಾನ ಅವರು ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ವಿಕಾಸ ಪ್ರಮುಖ್ ಸದಾಶಿವ ಕಡಂಬಾರು ಅವರು ಪ್ರಕೃತಿ ಸಂರಕ್ಷಣೆಯ ಅಗತ್ಯ ಹಾಗೂ ಗಿಡಗಳನ್ನು ನೆಡಬೇಕಾದ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್‍ನ ನಿರ್ದೇಶಕ ವಿಘ್ನೇಶ್ವರ ಭಟ್, ಸುಬ್ರಮಣ್ಯ ಭಟ್ ಕೂವತ್ತೋಡಿ, ಅಶ್ವಿನಿ, ಪ್ರಕಾಶಿನಿ ಹಾಗೂ ಗ್ರಾ.ಪಂ. ಸದಸ್ಯ ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪ್ರಕಾಶಿನಿ ಸ್ವಾಗತಿಸಿ, ಬ್ಯಾಂಕ್‍ನ ಕಾರ್ಯದರ್ಶಿ ಪ್ರಕಾಶ ವಂದಿಸಿದರು. ಕಾರ್ಯಕ್ರಮ ಕೊನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಒಂದೊಂದು ಗೇರು ಸಸಿ ವಿತರಿಸಲಾಯಿತು.


