HEALTH TIPS

ವಿದ್ಯಾಶ್ರೀಯಲ್ಲಿ ರಾಷ್ಟ್ರಮಟ್ಟದ ಯೋಗದಲ್ಲಿ ಸಾಧನೆಗೆ ಅಭಿನಂದನೆ


           ಮುಳ್ಳೇರಿಯ: 2019-20ನೇ ಸಾಲಿನ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಶಿಕ್ಷಣ ಕೇ0ದ್ರದ ವಿದ್ಯಾರ್ಥಿ ರವಿತೇಜ ಕೆ.ಎಲ್ ಅಮೋಘ  ಸಾಧನೆಯನ್ನು ಮಾಡಿದ್ದಾನೆ.
         ಮುಳ್ಳೇರಿಯದ ಖ್ಯಾತ ಉದ್ಯಮಿ ಲಕ್ಷ್ಮೀನಾರಾಯಣ ಎ.ಬಿ ಹಾಗೂ ವ0ದನ ಇವರ ಪುತ್ರನಾದ ರವಿತೇಜನು ಐದನೇ ತರಗತಿಯಿ0ದಲೇ ಯೋಗಾಭ್ಯಾಸ ಪ್ರಾರ0ಭಿಸಿ, ಆರನೇ ತರಗತಿಯಿ0ದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮವಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದನು. ಏಳನೇ ತರಗತಿಯಲ್ಲಿ ತ್ರಿಶೂರ್ ನಲ್ಲಿ ನಡೆದ ಯೋಗ ಅಸೋಸಿಯೇಶನ್ ಮತ್ತು ಬಿ.ವಿ.ಎನ್.ಆಯೋಜಿಸಿದ ಯೋಗ ಸ್ಪರ್ಧೆಯಲ್ಲಿ ಎರಡನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದನು. ಎ0ಟನೇ ತರಗತಿಯಲ್ಲಿ   ಯೋಗ ಒಲಿ0ಪಿಯಾಡ್ ಆಯೋಜಿಸಿದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತಾಗಿ ಜಿ ವಿ ರಾಜ ಸ್ಪೋಟ್ಸ್ ಸ್ಕೂಲ್ ತಿರುವನ0ತಪುರದಲ್ಲಿ ನಡೆದ ರಾಜ್ಯಮಟ್ಟದ ಸಧೆ9ಯಲ್ಲಿ ವಿಜೇತನಾಗಿ ಎನ್ ಸಿ ಇ ಆರ್ ಟಿ ದೆಹಲಿಯಲ್ಲಿ ಆಯೋಜಿಸಿದ ಯೋಗ ಸ್ಪರ್ಧೆಯಲ್ಲಿ ಪ್ರಥಮವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದನು.       
          ಚನ್ನರಾಯಪಟ್ಟಣದಲ್ಲಿ ನಡೆದ ಅಖಿಲ ಭಾರತ ಯೋಗ ಚಾ0ಪಿಯನ್‍ಶಿಪ್ ಆಯೋಜಿಸಿದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ  ತೃತೀಯ ಸ್ಥಾನವನ್ನು ಪಡೆದಿದ್ದಾನೆ. ಜಿಲ್ಲಾ ಯೋಗ ಅಸೋಸಿಯೇಶನ್ ಆಯೋಜಿಸಿದ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದು, ತೃಶೂರಿನಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪಧೆ9ಗೆ ಆಯ್ಕೆಯಾದನು. ಒ0ಭತ್ತನೇ ತರಗತಿಯಲ್ಲಿರುವಾಗ ಯೋಗ ಫೆಡರೇಶನ್ ಆಯೋಜಿಸಿದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತನಾಗಿ ಕಣ್ಣೂರಿನಲ್ಲಿ ನಡೆದ  ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದನು. ಮಾವು0ಗಾಲ್‍ನಲ್ಲಿ ಬಿ.ವಿ.ಎನ್ ಆಯೋಜಿಸಿದ ಜಿಲ್ಲಾಮಟ್ಟದ ಯೋಗ ಸ್ಪಧೆ9ಯಲ್ಲಿ ಆಯ್ಕೆಯಾಗಿ ಮಲಪ್ಪುರ0ನಲ್ಲಿ ಜರಗಿದ ರಾಜ್ಯಮಟ್ಟದ ಯೋಗ  ಸ್ಪಧೆ9ಯಲ್ಲಿ ಝೋನಲ್ ಸುತ್ತಿಗೆ ಆಯ್ಕೆಯಾಗಿ ನಾಲ್ಕನೇ ಸ್ಥಾನ ಪಡೆದಿದ್ದನು. ಪಾ0ಡಿಚ್ಚೇರಿಯಲ್ಲಿ ಯೋಗ ಅಸೋಸಿಯೇಶನ್ ಆಯೋಜಿಸಿದ ಮುಕ್ತ ರಾಷ್ಟ್ರೀಯ ಚಾ0ಪಿಯನ್‍ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹತ್ತನೇ ತರಗತಿಯಲ್ಲಿ ಯೋಗ ಒಲಿ0ಪಿಯಾಡ್ ನಡೆಸಿದ ಜಿಲ್ಲಾಮಟ್ಟದ ಯೋಗ ಸ್ಪರ್ಧೆ
ಯಲ್ಲಿ ಪ್ರಥಮ ಸ್ಥಾನಗಳಿಸಿ ತಿರುವನ0ತಪುರದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿ  ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದನು.
        ಎನ್ ಸಿ ಇ ಆರ್ ಟಿ ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ. ಇದಲ್ಲದೆ ಖೊಖೋ ಹಾಗೂ ಕಬಡ್ಡಿಪಟುವೂ ಆಗಿದ್ದಾನೆ. ಈತನನ್ನು ಗುರುವಾರ ವಿದ್ಯಾಶ್ರೀ ಶಿಕ್ಷಣ ಕೇ0ದ್ರದ ಆಡಳಿದ ಮ0ಡಳಿ ಹಾಗೂ ಅಧ್ಯಾಪಕ ವೃ0ದದವರು "ವಿದ್ಯಾಶ್ರೀ ಅವಾರ್ಡ್ ನೀಡಿ ಅಭಿನ0ದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries