ಉಪ್ಪಳ: ಕನ್ನಡ ಭಾಷೆ, ಸಂಸ್ಕøತಿಯ ರಕ್ಷಣೆ ಮತ್ತು ಕನ್ನಡಿಗರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಅಧಿಕಾರಿಗಳ ಧೋರಣೆಯ ವಿರುದ್ಧ ಪ್ರಾದೇಶಿಕ ಮಟ್ಟದಲ್ಲಿ ಕನ್ನಡ ಭಾಷಾಭಿಮಾನಿಗಳನ್ನು ರಾಜಕೀಯೇತರವಾಗಿ ಸಂಘಟಿಸುವ ದೃಷ್ಟಿಯಿಂದ ಪೈವಳಿಕೆ ಪಂಚಾಯತಿ ಮಟ್ಟದ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಜುಲೈ 13 ರಂದು ಬೆಳಿಗ್ಗೆ 10 ಕ್ಕೆ ಪೈವಳಿಕೆ ನಗರ ಹೈಸ್ಕೂಲಿನಲ್ಲಿ ಸಭೆ ಕರೆಯಲಾಗಿದೆ.
ವಿವಿಧ ಕನ್ನಡ ಪರ ಸಂಘಟನೆಗಳು, ಅಂಗನವಾಡಿ ಅಧ್ಯಾಪಿಕೆಯರು, ಸಹಾಯಕಿಯರು, ಕನ್ನಡ ಮಾಧ್ಯಮ ಅಧ್ಯಾಪಕರು, ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

