ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಂಗಳವಾರ ತಮ್ಮ 16ನೇ ಚಾತುರ್ಮಾಸ್ಯ ವ್ರತಸಂಕಲ್ಪದೊಂದಿಗೆ ಚಾಲನೆ ನೀಡಿದ್ದು, ಸೆ.14 ರಂದು ಸಂಪನ್ನಗೊಳ್ಳಲಿದೆ.
ಮಂಗಳವಾರ ಕೊಂಡೆವೂರು ಮಠದಲ್ಲಿ ಬೆಳಿಗ್ಗೆ 8.30ಕ್ಕೆ ಗಣಹೋಮ, 9.30ಕ್ಕೆ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭಿಷೇಕ, 10.30ಕ್ಕೆ ವ್ಯಾಸಪೂಜೆ ಆರಂಭವಾಗಿ 12.00ಕ್ಕೆ ಮಂಗಳಾರತಿ, 12.30ಕ್ಕೆ ಮಹಾಪೂಜೆ ನಡೆಯಿತು. ಬಳಿಕ ಅನ್ನಪ್ರಸಾದ ವಿತರಣೆ ನೆರವೇರಿತು. ಇಂದು(ಬುಧವಾರ) ಸಂಜೆ 7.ಕ್ಕೆ "ಶ್ರೀ ಗುರುಪಾದುಕಾ ಪೂಜೆ", ಭಜನೆ, ಬಳಿಕ ಶ್ರೀಗಳಿಂದ "ಸತ್ಸಂಗ", ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಕ್ತಾದಿಗಳಿಂದ ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ "ರಜತ ಪಾದುಕೆ ಸಮರ್ಪಣೆ" ನಡೆಯಲಿದೆ.
ಸೆ. 14.ರಂದು ಶನಿವಾರ ಸಂಪನ್ನಗೊಳ್ಳಲಿರುವ ಚಾತುರ್ಮಾಸ್ಯದ ಈ ಸತ್ಸಂದರ್ಭದಲ್ಲಿ ಪ್ರತೀ ಭಾನುವಾರ ಸಂಜೆ 3.ರಿಂದ 5. ರ ವರೆಗೆ ಯೋಗಾಭ್ಯಾಸ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಹಾಗೂ ಸತ್ಸಂಗಗಳನ್ನು ಆಯೋಜಿಸಿದೆ. ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ಭಕ್ತಾದಿಗಳು ಆಗಮಿಸಿ, ಶ್ರೀಗುರು ಕೃಪಾಶೀರ್ವಾದ ಪಡೆದು ಅನುಗ್ರಹೀತರಾಗಬೇಕಾಗಿ ಆಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜು.16.ರಂದು ಖಗ್ರಾಸ ಚಂದ್ರಗ್ರಹಣ ಪ್ರಯುಕ್ತ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.



