ಕುಂಬಳೆ: ಮೊಗೇರ ಸರ್ವೀಸ್ ಸೊಸೈಟಿಯ ನೇತೃತ್ವದಲ್ಲಿ ಆಗಸ್ಟ್ 4 ರಂದು ಕುಂಬಳೆ ಪಂಚಾಯತಿ ಕಿದೂರು ಕುಂಟಂಗೇರಡ್ಕ ರಾಜೀವ ಗಾಂಧಿ ಸಭಾಂಗಣದಲ್ಲಿ ಜರಗಲಿರುವ ಮೊಗೇರ ಆಟಿದ ಕೂಟ-2019 ಹಾಗೂ ಸಾಂಸ್ಕøತಿಕ ನೃತ್ಯ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಿದೂರು-ಕುಂಟಂಗೇರಡ್ಕ ಶ್ರೀ ಕುಪ್ಪೆ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ಇತ್ತೀಚೆಗೆ ಜರಗಿತು.
ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಬಾಬು ಯು.ಪಚ್ಲಂಪಾರೆ ಅವರು ಮೊಗೇರ ಸಮುದಾಯದ ಹಿರಿಯ ನೇತಾರರೂ, ಶ್ರೀ ಕುಪ್ಪೆ ಪಂಜುರ್ಲಿ ದೈವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚಂದ್ರ ಕಾಜೂರು ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಬಿಡುಗಡೆಗೊಳಿಸಿದರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರಿಕಾಕ್ಷ ಕೆ.ಎಲ್., ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಕೆ.ಕೆ.ಸ್ವಾಮಿಕೃಪಾ, ಪ್ರಧಾನ ಕಾರ್ಯದರ್ಶಿ ಗಿರಿಜಾ ತಾರನಾಥ ಕುಂಬಳೆ, ಬಾಲಕೃಷ್ಣ ಗೋಳಿಕಟ್ಟೆ, ಕುಂಟಂಗೇರಡ್ಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಅನೀಶ್ ಕುಂಟಂಗೇರಡ್ಕ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಮೋಹನ ಯು.ಮಂಜೇಶ್ವರ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯ ಆದರ್ಶ ಪಟ್ಟತ್ತ ಮೊಗೇರ್ ವಂದಿಸಿದರು.


