HEALTH TIPS

ಮಾಯಾವತಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ

         
      ಮಂಜೇಶ್ವರ: ಕಳೆದ ಐದು ತಿಂಗಳುಗಳಿಂದ ಮಂಜೇಶ್ವರ ಪಾವೂರಿನ ಸ್ನೇಹಾಲಯ ಮಾನಸಿಕ ಅಸ್ವಸ್ಥೆ ಮಹಿಳೆಯರ ಪುನಶ್ಚೇತನಾ ಕೆಂದ್ರದ ನಿವಾಸಿಯಾಗಿದ್ದ ಮಹಿಳೆಯೋರ್ವೆ ಪೂರ್ಣ ಗುಣಮುಖರಾಗಿ ಸೋಮವಾರ ತೆರಳಿದರು.
     ಪೂರ್ಣ ಹುಚ್ಚಿಯಾಗಿ ಉಪ್ಪಿನಂಗಡಿಯಲ್ಲಿ ಚಿಂದಿ ಬಟ್ಟೆಯಲ್ಲಿ ರಸ್ತೆ ಬದಿಯಲ್ಲಿ ನಡೆದಾಡುತ್ತಿದ್ದವಳು ಕಳೆದ ಐದು ತಿಂಗಳ ಹಿಂದೆ ಸ್ನೇಹಾಲಯ ಸೇರಿದ್ದಳು.  ಹುಚ್ಚಿಯೆಂಬ ಸಮಾಜದ ಮೂದಲಿಕೆಯಿಂದ ಆಕೆಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಉಪ್ಪಿನಂಗಡಿ ಪೆÇಲೀಸರು ಆಕೆಯನ್ನು ಸ್ನೇಹಾಲಯಕ್ಕೆ ಕರೆ ತಂದಿದ್ದರು. ಅದು ಆಕೆಯ ಮರುಜನ್ಮಕ್ಕೆ ನಾಂದಿಯಾಯಿತು. ಅಂದಿನಿಂದ ಆಕೆಯು ಸ್ನೇಹ ಮಂದಿರದ ಪ್ರೀತಿಯಲ್ಲಿ ಕಳೆಯತೊಡಗಿದರು. ಅಲ್ಪಾವ„ ಚಿಕಿತ್ಸೆಯಲ್ಲೇ ಮನೋಸ್ಥಿಮಿತ ಮರಳಿ ಗಳಿಸಿದ್ದರು. ಮುದುಡಿ ಮೂಲೆ ಸೇರುತ್ತಿದ್ದ ಆಕೆ ಲವಲವಿಕೆಯಿಂದ ಓಡಾಡತೊಡಗಿದಳು. ಮಾನಸಿಕ ಲಯ ತಪ್ಪಿದ ಅಲ್ಲಿನ 32 ರಷ್ಟು ಮಹಿಳಾ ನಿವಾಸಿಗಳ ಪ್ರೀತಿ ಪಾತ್ರರಾದರು. ಹಾಸಿಗೆ ಹಿಡಿದಿರುವ ರೋಗಿಗಳ ಆರೈಕೆಯನ್ನೂ ಮಾಡುತ್ತಿದ್ದರು. ಹಾಗೆ, ಅವರು ಸ್ನೇಹಾಲಯದ ಭಾಗವೇ ಆಗಿ ಹೋಗಿದ್ದರು.
      ಆಪ್ತ ಸಮಾಲೋಚನೆಯಲ್ಲಿ ಅವರು ತನ್ನನ್ನು, ತನ್ನವರನ್ನು ಗುರುತು ಹಚ್ಚಿದ್ದರು. ಅವರ ಹೆಸರು ಮಾಯಾವತಿ. ಮಧ್ಯ ಪ್ರದೇಶ ರಾಜ್ಯದ ನಿವಾಸಿ. ಪತಿ, ಐವರು ಮಕ್ಕಳನ್ನೊಳಗೊಂಡ ಬಡ, ತುಂಬು ಸಂಸಾರದ ಮನೆಯೊಡತಿ. ಕಷ್ಟಪಟ್ಟು ಮಕ್ಕಳನ್ನು ಸಲಹುತ್ತಿದ್ದರು. ಕುಟುಂಬ ನಿರ್ವಹಣೆಯಲ್ಲಿ ಪತಿಗೆ ಹೆಗಲೊಡ್ಡುತ್ತಿದ್ದರು. ಆದರೆ, ಆ ಕುಟುಂಬದಲ್ಲಿ ಸಂತೋಷ ಬಹುಕಾಲ ಉಳಿಯಲಿಲ್ಲ. ಮಾಯಾವತಿ ಅವರ ಮೂವರು ಕರುಳ ಕುಡಿಗಳು ಮಾರಕ ಕಾಯಿಲೆಗೆ ತುತ್ತಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಮರಣವಪ್ಪುತ್ತಾರೆ.      ಹೆತ್ತೊಡಲಿನ ಮನಸ್ಸಿನ ತಾಳ ತಪ್ಪಲು ಇನ್ನೇನು ಬೇಕು...?
      ಒಂದು ವರ್ಷ ಹಿಂದೆ.......  ಮಾಯಾವತಿ ಮನೆಯಿಂದ ಮಾಯವಾಗಿದ್ದರು. ಪತಿ, ಸಂಬಂ„ಕರು ಎಲ್ಲೆಡೆ ಹುಡುಕಾಡುತ್ತಾರೆ. ಸ್ಥಳೀಯ ಪೆÇಲೀಸರಿಗೂ ದೂರು ಸಲ್ಲಿಸಲಾಗಿ ತಿಂಗಳುಗಳ ಕಾಲ ಹುಡುಕಾಡಿಯೂ ಫಲ ಶೂನ್ಯ. ಹೌದು.... ವರ್ಷದ ಹಿಂದೆ ಕಣ್ಮರೆಯಾದ ಮಾಯಾವತಿ ಐದು ತಿಂಗಳಿನಿಂದ ಸ್ನೇಹಾಲಯದ ಆರೈಕೆಯಿಂದಾಗಿ ಮತ್ತೆ ಬದುಕಿನೆಡೆಗೆ ಸ್ವಾಸ್ಥ್ಯ ಹೆಜ್ಜೆಯಿರಿಸಿದ್ದಾರೆ. ತನ್ನ ಬದುಕಿನಲ್ಲಿ ಸಂಭವಿಸಿದ್ದೆಲ್ಲವೂ ಆಕಸ್ಮಿಕ, ಅದು ನಡೆದು ಹೋಗಿದೆ. ಚಿಂತಿಸಿ ಫಲವಿಲ್ಲ. ಮುಂದಿನ ಬದುಕನ್ನು ಸುಖಕರವಾಗಿ ಸಾಗಿಸಬೇಕು ಎಂಬುವುದನ್ನು ಅರ್ಥೈಸಿದ್ದಾರೆ. ಮಾಯಾವತಿ ತಿಳಿಸಿದ ವಿಳಾಸಕ್ಕೆ ಸ್ನೇಹಾಲಯದ ಪತ್ರ ಸಂದೇಶ ರವಾನೆಯಾಗುತ್ತದೆ.
       ಹಾಗೆ, ಅವರ ಪತಿ ಯಶವಂತ ಮತ್ತು ಮಿತ್ರರೋರ್ವರು ಶನಿವಾರ ಸ್ನೇಹಾಲಯಕ್ಕೆ ತಲುಪಿದ್ದರು. ಸತ್ತೇ ಹೋಗಿರಬಹುದೆಂದು ಭಾವಿಸಿದ್ದ ಪತ್ನಿಯನ್ನು ಕಣ್ಣೆದುರು ಕಂಡಾಗ ಕೈಹಿಡಿದಾತನ ಆನಂದಕ್ಕೆ ಪಾರಮ್ಯವೇ ಇರಲಿಲ್ಲ. ಆನಂದಭಾಷ್ಪ ಸುರಿಸಿ ಬೀಳ್ಕೊಟ್ಟ ಸ್ನೇಹಾಲಯದ ಎಲ್ಲ ಸಹೋದರಿಯರನ್ನು ಮಾಯಾವತಿ ತಬ್ಬಿ, ಮುತ್ತಿಕ್ಕಿದರು. ಸ್ನೇಹನಿ„ ಜೋಸೆಫ್ ಅವರ ಮುಂದೆ ಕೈ ಮುಗಿದು `ನನಗೆ ಮರುಜನ್ಮ ನೀಡಿರುವಿರಿ, ಪತಿ, ಮಕ್ಕಳ ಬಳಿ ಮರಳಿಸಿದಿರಿ. ಕೋಟಿ ಕೋಟಿ ಪ್ರಣಾಮಗಳು ನಿಮಗೆ, ಏಳೇಳು ಜನ್ಮದಲ್ಲಿಯೂ ನಿಮ್ಮನ್ನು ಮರೆಯಲಾರೆ' ಎಂದು ತನ್ನ ಮನದಾಳವನ್ನು ವ್ಯಕ್ತಪಡಿಸಿ ಆಕೆ ಸ್ನೇಹಾಲಯದಿಂದ ಸ್ವಾಲಯಕ್ಕೆ ಪಯಣ ಬೆಳೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries