ನವದೆಹಲಿ: 2032ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಸಲು ಭಾರಿ ಪ್ರಮಾಣದ ಹಾಗೂ ಸದೃಢ ಮೂಲಸೌಕರ್ಯದ ಅಗತ್ಯತೆಯ ಬಗ್ಗೆ 2018-19ರ ಆರ್ಥಿಕ ಸಮೀಕ್ಷೆ ಬಲವಾಗಿ ಪ್ರತಿಪಾದಿಸಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಸ ತ್ ನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ, ಉತ್ಪಾದನಾ ಬೆಳವಣಿಗೆಯನ್ನು ವೇಗಗೊಳಿಸಲು ಸ್ಟಾರ್ಟ್ ಅಪ್ ಇಂಡಿಯಾ, ಉದ್ಯಮ ಸ್ನೇಹಿ ವಾತಾವರಣ, ಮೇಕ್ ಇನ್ ಇಂಡಿಯಾ, ನಿರ್ಣಾಯಕ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ನೀತಿ ಸುಧಾರಣೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇದರಿಂದ 190 ದೇಶಗಳಲ್ಲಿ ಭಾರತದ ಶ್ರೇಯಾಂಕ ಹಿಂದಿನ 100 ನೇ ಸ್ಥಾನಕ್ಕಿಂತ 77 ನೇ ಸ್ಥಾನಕ್ಕೆ ಏರಿದೆ ಎಂದು 2018ರಲ್ಲಿ ಬಿಡುಗಡೆಯಾದ ವಿಶ್ವಬ್ಯಾಂಕ್ ನ 'ಉದ್ಯಮ ಸ್ನೇಹಿ ವಾತಾವರಣ' ಕುರಿತ ವರದಿ ತಿಳಿಸಿದೆ ಎಂದರು.
ಮೂಲಸೌಕರ್ಯದಲ್ಲಿನ ಹೂಡಿಕೆಯ ಅಂತರವನ್ನು ನಿವಾರಿಸಲು ಸಾರ್ವಜನಿಕ-ಸರ್ಕಾರಿ-ಖಾಸಗಿ ಅಡಿಯಲ್ಲಿ ಹೊಸ ವಿಧಾನವನ್ನು ಅನುಸರಿಬೇಕಾಗಿದೆ ಎಂದು ಸಮೀಕ್ಷೆ ಪ್ರತಿಪಾದಿಸಿದೆ.
ದೇಶದ ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಕುರಿತ ಸಮೀಕ್ಷೆಯ ವಿಶ್ಲೇಷಣೆಯಲ್ಲಿ, ಭಾರತ ಭಾರಿ ಪ್ರಮಾಣದ ಮೂಲ ಸೌಕರ್ಯದೊಂದಿಗೆ ಸಧೃಡವಾದ ಕೈಗಾರಿಕೆಯನ್ನು ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ದಂತೆ 2018-19ರ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ದರ 2017-18ರಲ್ಲಿದ್ದ ಶೇ 4.4 ರ ಬೆಳವಣಿಗೆಯ ದರಕ್ಕೆ ಹೋಲಿಸಿದರೆ ಶೇ.3.6 ರಷ್ಟಿದೆ. ಮಂದಗತಿಯ ಸಾಲ ಪೂರೈಕೆ ಮತ್ತಿತರ ಕಾರಣಗಳಿಂದ ಮೂರನೇ ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ಪಾದನಾ ಚಟುವಟಿಕೆಗಳು ಕುಂಠಿತಗೊಂಡಿದ್ದವು ಎಂದು ಸಮೀಕ್ಷೆ ತಿಳಿಸಿದೆ.
ಈ ಮಧ್ಯೆ, ಮೂಲಸೌಕರ್ಯ ಬೆಂಬಲಿತ ಎಂಟು ಪ್ರಮುಖ ಕೈಗಾರಿಕಾ ವಲಯಗಳು 2018-19ಕ್ಕೆ ಸಮನಾಗಿ 2017-19ರಲ್ಲಿ ಶೇ. 4.3 ರಷ್ಟು ಒಟ್ಟಾರೆ ಬೆಳವಣಿಗೆ ದರ ಸಾಧಿಸಿವೆ.
ಉದಾರ ವಿದೇಶಿ ಬಂಡವಾಳ ಹೂಡಿಕೆ ನೀತಿಯ ಮೂಲಕ ಹೂಡಿಕೆ ಬಂಡವಾಳ ಉತ್ತೇಜನದಲ್ಲಿ ಸರ್ಕಾರ ಕ್ರಿಯಾಪರ ಪಾತ್ರ ವಹಿಸುತ್ತಿದೆ. 2018-19ರ ಅವಧಿಯಲ್ಲಿ ಒಟ್ಟು 44.36 ಶತಕೋಟಿ ಡಾಲರ್ ಹೂಡಿಕೆಯಾಗಿದ್ದರೆ. 2017-18ರಲ್ಲಿ ಇದು 44.85 ಶತಕೋಟಿಯಷ್ಟಿತ್ತು ಎಂದು ಸಮೀಕ್ಷೆ ತಿಳಿಸಿದೆ.


